ಸ್ಟಾಕ್ ಹೋಮ್: ತಾಂಜೇನಿಯಾದ ಕಾದಂಬರಿಕಾರ ಅಬ್ದುಲ್ ರಜಾಕ್ ಗುರ್ನಾ ಅವರಿಗೆ 2021ನೇ ಸಾಲಿನ ಸಾಹಿತ್ಯ ವಿಭಾಗದ ನೊಬೆಲ್ ಪ್ರಶಸ್ತಿ ಘೋಷಿಸಲಾಗಿದೆ.
ಸ್ವೀಡಿಷ್ ಅಕಾಡೆಮಿಯು, ಗಲ್ಫ್ ರಾಷ್ಟ್ರಗಳಲ್ಲಿನ ವಸಾಹತುಶಾಹಿಯ ಪರಿಣಾಮಗಳು, ಅಲ್ಲಿನ ಸಂಸ್ಕೃತಿ, ಏಷ್ಯಾ-ಆಫ್ರಿಕಾ ಖಂಡಗಳ ನಡುವಿನ ದೇಶಗಳಲ್ಲಿನ ವಲಸಿಗರ ಭವಿಷ್ಯದ ಕುರಿತ ಸಹಾನುಭೂತಿ ಹಾಗೂ ರಾಜಿ ಇಲ್ಲದ ನಿಲುವುಗಳನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ ಎಂದು ಹೇಳಿದೆ.
ಜಾಂಜಿಬಾರ್‌ನಲ್ಲಿ ಜನಿಸಿ ಇಂಗ್ಲೆಂಡ್‌ನಲ್ಲಿ ನೆಲೆಸಿರುವ ಗುರ್ನಾ ಕೆಂಟ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಅವರ ಕಾದಂಬರಿ "ಪ್ಯಾರಡೈಸ್" ಅನ್ನು 1994 ರಲ್ಲಿ ಬುಕರ್ ಪ್ರಶಸ್ತಿಗೆ ಶಾರ್ಟ್‌ಲಿಸ್ಟ್ ಮಾಡಲಾಗಿತ್ತು.
ಅಬ್ದುಲ್ ರಜಾಕ್ ಗುರ್ನಾ ಅವರು ಒಟ್ಟು ಮೂರು ಕಾದಂಬರಿಗಳನ್ನು ಬರೆದಿದ್ದು, 1994ರಲ್ಲಿ ಅವರ ಮೊದಲ ಕಾದಂಬರಿ "ಪ್ಯಾರಡೈಸ್" ಪ್ರಕಟವಾಯಿತು. 2001ರಲ್ಲಿ 'ಬೈದಿ ಸೀ' ಹಾಗೂ 2005ರಲ್ಲಿ 'ಡಜರ್ಸನ್' ಕಾದಂಬರಿಯನ್ನು ಪ್ರಕಟಿಸಿದ್ದಾರೆ.