ನವದೆಹಲಿ: ಭಾರತದಲ್ಲಿ ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಸಾರ್ವಜನಿಕ-ಖಾಸಗಿ ಉಪಕ್ರಮದಲ್ಲಿ ನಡೆಸಲಾದ ತಿಂಗಳವಾರು ಮತ್ತು ರಾಜ್ಯವಾರು ಆರೋಗ್ಯ ವಿಮೆ ಹಕ್ಕುಗಳ ವಿವರವಾದ ವಿಶ್ಲೇಷಣೆ ಬಗ್ಗೆ ಅಧ್ಯಯನ ನಡೆಸಲಾಗಿದೆ. ಈ ವೇಳೆ ಹಲವು ರಾಜ್ಯಗಳು ಕೋವಿಡ್ -19 ಸಾವುಗಳ ಸಂಖ್ಯೆ ಕಡಿಮೆಯಾಗಿದೆ ಎಂದು ತಿಳಿಸಿರುವ ಬಗ್ಗೆ ವರದಿಯಾಗಿದೆ.
ಜೀವನ ರಕ್ಷಾ ಯೋಜನೆ ಅಡಿಯಲ್ಲಿ ಮಾಡಿರುವ ಹೊಸ ಸಂಶೋಧನೆಗಳು ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದ ಸಾವುಗಳ ಬಗ್ಗೆ ಗುಜರಾತ್, ಮತ್ತು ರಾಜಸ್ಥಾನಗಳು ಅತಿ ಕಡಿಮೆ ಎಂದು ವರದಿ ನೀಡಿರುವ ಬಗ್ಗೆ ಸೂಚಿಸುತ್ತಿವೆ. ಸತ್ಯವೆಂದರೆ ರಾಜಸ್ಖಾನದಲ್ಲಿ ಶೇ.5722, ರಾಜಸ್ಖಾನದಲ್ಲಿ ಶೇ.473, ಜಾರ್ಖಂಡದಲ್ಲಿ ಶೇ.464 ಮತ್ತು ಉತ್ತರ ಪ್ರದೇಶದಲ್ಲಿ ಶೇ.228ರಷ್ಟು ಹೆಚ್ಚಳವಾಗಿರುವುದು ಬೆಳಕಿಗೆ ಬಂದಿದೆ.
ಉದಾಹರಣೆಗೆ, ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್ 2021ರ ತಿಂಗಳುಗಳಲ್ಲಿ ಗುಜರಾತ್ ಸರ್ಕಾರದಿಂದ ನೀಡಲಾದ ಅಂಕಿ-ಅಂಶಗಳಿಂದ ಸಂಗ್ರಹಿಸಲಾದ ದತ್ತಾಂಶವು ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದ 23 ಮಂದಿ ಮಾತ್ರ ಮೃತಪಟ್ಟಿದ್ದಾರೆ ಎಂದು ವರದಿಯು ಹೇಳುತ್ತದೆ. ಆದರೆ ಅದೇ ಅವಧಿಯಲ್ಲಿ ಕೋವಿಡ್ -19 ಸೋಂಕಿನಿಂದ ಮೃತಪಟ್ಟಿರುವ ಬಗ್ಗೆ 1,316 ಸಂತ್ರಸ್ತರು ವಿಮಾ ಹಕ್ಕುಗಳನ್ನು (ಗುಂಪು/ವೈಯಕ್ತಿಕ ಯೋಜನೆಗಳು) ಸಲ್ಲಿಸಿರುತ್ತಾರೆ. ಇದು ಸರ್ಕಾರಗಳು ನೀಡಿರುವ ಸಾವಿನ ಸಂಖ್ಯೆಯ ಕುರಿತು ಅಂಕಿ-ಅಂಶಗಳ ಮೇಲೆ ಅನುಮಾನ ಹುಟ್ಟಿಸುವಂತಿದೆ.
ಸಾವಿನ ವಿಷಯದಲ್ಲಿ ಸರ್ಕಾರಗಳ ತಪ್ಪು ಲೆಕ್ಕ?:
ದೇಶದಲ್ಲಿ ಕೊವಿಡ್-19 ಸೋಂನಿಂದ ಪ್ರಾಣ ಬಿಟ್ಟದವರ ಸಂಖ್ಯೆಗೆ ಸಂಬಂಧಿಸಿದಂತೆ ಸರ್ಕಾರಗಳು ತಪ್ಪು ಲೆಕ್ಕ ಕೊಟ್ಟಿವೆಯಾ ಎಂಬ ಅನುಮಾನ ಹೆಚ್ಚುತ್ತಿದ್ದಾರೆ. ಏಕೆಂದರೆ ಗುಜರಾತ್ ಸರ್ಕಾರದ ಪ್ರಕಾರ, ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಿನಲ್ಲಿ ಕೇವಲ 23 ಮಂದಿ ಕೊವಿಡ್-19 ಸಂಬಂಧಿತ ರೋಗದಿಂದ ಪ್ರಾಣ ಬಿಟ್ಟಿದ್ದಾರೆ. ಆದರೆ ಇದೇ ಅವಧಿಯಲ್ಲಿ ಕೊರೊನಾವೈರಸ್ ಸೋಂಕಿನಿಂದಲೇ ಸಾವನ್ನಪ್ಪಿರುವ ಬಗ್ಗೆ 1316 ಸಂತ್ರಸ್ತ ಕುಟುಂಬದ ಜನರು ತಮ್ಮ ಹಕ್ಕು ಪಡೆಯುವುದಕ್ಕಾಗಿ ಸರ್ಕಾರಿ ಹಾಗೂ ಖಾಸಗಿ ವಿಮೆ ಕಂಪನಿಗಳಿಗೆ ಅರ್ಜಿ ಸಲ್ಲಿಸಿವೆ.
ರಾಜಸ್ಥಾನದಲ್ಲಿ ಮೂರು ತಿಂಗಳ ಅವಧಿಯಲ್ಲಿ 33 ಮಂದಿ ಕೊವಿಡ್-19 ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಹೇಳಿದರೆ, ಇದೇ ಅವಧಿಯಲ್ಲಿ 156 ಜನರು ವಿಮೆ ಹಕ್ಕು ಪಡೆಯುವುದಕ್ಕಾಗಿ ಅರ್ಜಿ ಸಲ್ಲಿಸಿರುವುದು ಗೊತ್ತಾಗಿದೆ. ಮೂರನೇ ಸ್ಥಾನದಲ್ಲಿ ಜಾರ್ಖಂಡ್ ಗುರುತಿಸಿಕೊಂಡಿದ್ದು, ಸರ್ಕಾರದ ನೀಡಿರುವ ಲೆಕ್ಕ 22 ಆಗಿದ್ದರೆ, ವಿಮೆಗಾಗಿ ಹಕ್ಕು ಮಂಡಿಸಿದವರ ಸಂಖ್ಯೆ 102 ಆಗಿದೆ. ಉತ್ತರ ಪ್ರದೇಶದಲ್ಲಿ 301 ಜನರು ಕೊರೊನಾವೈರಸ್ ಸೋಂಕಿನಿಂದ ಸಾವನ್ನಪ್ಪಿರುವ ಬಗ್ಗೆ ಸರ್ಕಾರ ತಿಳಿಸಿದೆ, ಆದರೆ ಅದೇ ಮೂರು ತಿಂಗಳ ಅವಧಿಯಲ್ಲಿ 685 ಸಂತ್ರಸ್ತ ಕುಟುಂಬಗಳ ಸದಸ್ಯರು ವಿಮೆ ಕಂಪನಿಗಳಲ್ಲಿ ತಮ್ಮ ಪರಿಹಾರದ ಹಕ್ಕು ಪಡೆದುಕೊಳ್ಳುವುದಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ.
ಕೃತಕವಾಗಿ ಸಾವಿನ ಸಂಖ್ಯೆ ತಗ್ಗಿಸಿದ ರಾಜ್ಯಗಳು?:
ಕಳೆದ ಮೂರು ತಿಂಗಳ ಅವಧಿಯಲ್ಲಿ ಹಲವು ರಾಜ್ಯಗಳು ಕೃತಕವಾಗಿ ಕೊವಿಡ್-19 ಸಾವಿನ ಪ್ರಕರಣಗಳನ್ನು ತಗ್ಗಿಸಿವೆ ಎಂದು ಪ್ರಾಜೆಕ್ಟ್ ಜೀವನ್ ರಕ್ಷಾ ಸಂಯೋಜಕರಾದ ಮೈಸೂರು ಸಂಜೀವ್ ದೂಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಳೆದ ಎರಡು ವಾರಗಳಲ್ಲಿ ಕೋವಿಡ್ -19 ಸಾವಿನ ಸಂಖ್ಯೆಯಲ್ಲಿ ಭಾರಿ ಇಳಿಕೆ ಕಂಡು ಬಂದಿದೆ. ಈ ಬಗ್ಗೆ ಪ್ರಾಯೋಗಿಕ ದೃಷ್ಟಿಕೋನವನ್ನು ಹೊಂದಿರುವುದು ಅತ್ಯಗತ್ಯವಾಗಿದೆ ಎಂದು ಅವರು ಹೇಳಿದ್ದಾರೆ. "ಮತ್ತೊಂದೆಡೆ, ಸುಪ್ರೀಂ ಕೋರ್ಟ್‌ನ ಮಾರ್ಗಸೂಚಿಗಳ ಪ್ರಕಾರ ಮೃತ ಕುಟುಂಬ ಸದಸ್ಯರಿಗೆ ಪರಿಹಾರ ಮೊತ್ತವನ್ನು ವಿತರಿಸುವುದರಿಂದ ಮುಂದಿನ ಎರಡು ತಿಂಗಳಲ್ಲಿ ಸಾವಿನ ಸಂಖ್ಯೆಯ ದತ್ತಾಂಶವು ಹೆಚ್ಚಿನ ಪ್ರಮಾಣದಲ್ಲಿ ಸಮನ್ವಯಗೊಳ್ಳುವ ಸಾಧ್ಯತೆಯಿದೆ" ಎಂದು ಅವರು ತಿಳಿಸಿದ್ದಾರೆ.
ಸಂತ್ರಸ್ತ ಕುಟುಂಬಕ್ಕೆ ತಲಾ 50,000 ಪರಿಹಾರ:
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹಾಗೂ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಜಂಟಿಯಾಗಿ ನಡೆಸಿದ ಸಭೆಯಲ್ಲಿ ಕೊವಿಡ್-19 ಸೋಂಕಿನಿಂದ ಪ್ರಾಣ ಬಿಟ್ಟ ಪ್ರತಿಯೊಂದು ಕುಟುಂಬದ ಸದಸ್ಯರಿಗೆ ತಲಾ 50,000 ರೂಪಾಯಿ ಪರಿಹಾರ ನೀಡುವಂತೆ ಮಾರ್ಗಸೂಚಿಯನ್ನು ಹೊರಡಿಸಿತ್ತು.
ದತ್ತಾಂಶ ವಿಶ್ಲೇಷಣೆ ಬಗ್ಗೆ ವಿವರಣೆ:
ಕೊರೊನಾವೈರಸ್ ಸಾವಿನ ಪ್ರಕರಣಗಳ ನಡುವಿನ ಅಂತರದ ಬಗ್ಗೆ ವಿಶ್ಲೇಷಣೆಯನ್ನು ಹೇಗೆ ನಡೆಸಲಾಗಿದೆ ಎಂದು ಕೇಳಿದಾಗ, ಸಂಜೀವ್ ಉತ್ತರ ನೀಡಿದ್ದಾರೆ. ಪ್ರತಿ ರಾಜ್ಯದಲ್ಲಿ ವರದಿಯಾದ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರಕ್ಕೆ (ಐಆರ್ಡಿಎ) ವಿಮಾ ಕ್ಲೈಮ್ ಡೇಟಾವನ್ನು ವಿಶ್ಲೇಷಿಸಲಾಗಿದೆ. "ಎಲ್ಲಾ ವಿಮಾ ಕಂಪನಿಗಳು, ಖಾಸಗಿ ಮತ್ತು ಸಾರ್ವಜನಿಕ, IRDA ಯ ಸಾಮಾನ್ಯ ವಿಮಾ (GI) ಕೌನ್ಸಿಲ್‌ಗೆ ವರದಿ ಮಾಡುತ್ತವೆ. ಜಿಐ ಕೌನ್ಸಿಲ್ ನಮ್ಮ ಸಂಶೋಧನೆ ಮತ್ತು ವಿಶ್ಲೇಷಣೆ ಉದ್ದೇಶಗಳಿಗಾಗಿ ಮಾಸಿಕ ಕೋವಿಡ್ -19 ಆರೋಗ್ಯ ವಿಮಾ ಕ್ಲೈಮ್ ಡೇಟಾವನ್ನು ಹಂಚಿಕೊಂಡಿದೆ, "ಎಂದು ಅವರು ಹೇಳಿದರು.
ಕರ್ನಾಟಕದ ಅಂಕಿ-ಅಂಶಗಳನ್ನು ವಿಶ್ಲೇಷಿಸಿಸಿದಾಗ ಉತ್ತರ ಭಾರತದ ರಾಜ್ಯಗಳಿಗೆ ಹೋಲಿಸಿದರೆ ದಕ್ಷಿಣ ಭಾರತದ ರಾಜ್ಯದಲ್ಲಿ ಕಡಿಮೆ ಸಾವಿನ ವರದಿ ಮಾಡುವಿಕೆ ಪ್ರಮಾಣ "ಗಣನೀಯವಾಗಿ ಕಡಿಮೆಯಾಗಿದೆ" ಎಂದು ಅಧ್ಯಯನವು ಗಮನಿಸಿದೆ. "ಸಾವುಗಳನ್ನು ವರದಿ ಮಾಡುವ ಪ್ರಕ್ರಿಯೆಯು ಕರ್ನಾಟಕದಲ್ಲಿ ಹೆಚ್ಚು ಪ್ರಗತಿಪರವಾಗಿದೆ. ರಾಜ್ಯದಲ್ಲಿ ಗಣನೀಯ ಪ್ರಮಾಣದ ಜನಸಂಖ್ಯೆಯನ್ನು ವಿಮೆ ಮಾಡಲಾಗಿದೆ ಎಂಬ ಅಂಶವನ್ನು ಸಹ ಗಮನಿಸಬೇಕಾದ ಇನ್ನೊಂದು ಅಂಶವಾಗಿದೆ, "ಎಂದು ಅವರು ಹೇಳಿದ್ದಾರೆ.