ಮಂಜೇಶ್ವರ: ಮಾಡದ ಪರಿಪೂರ್ಣ ವೆಲ್ಪೇರ್ ಫೌಂಡೇಶನ್ ದಿ ಯೂತ್ ಪಾರ್ ಸೋಶಿಯಲ್ ಸರ್ವೀಸ್ ಸಂಘಟನೆ ವತಿಯಿಂದ ದೇಶಸೇವೆಗೆ ಅಧಿಕೃತ ಅಂಗೀಕಾರ ಪಡೆದು ಬಿಜೆಪಿಯ ಕಾಸರಗೋಡು ಜಿಲ್ಲಾ ನೂತನ ಅಧ್ಯಕ್ಷರಾಗಿ ನೇಮಕಗೊಂಡ ಕುಂಟಾರು ರವೀಶ ತಂತ್ರಿ ಅವರಿಗೆ ಅಭಿನಂದನಾ ಕಾರ್ಯಕ್ರಮ ಪರಿಪೂರ್ಣ ಕಚೇರಿಯಲ್ಲಿ ಸಂಸ್ಥೆಯ ಅಧ್ಯಕ್ಷರಾದ ಸುಶ್ರುತ್ ಮಾಡ ಇವರ ನೇತೃತ್ವದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಹಿರಿಯ ನಾಯಕ ಶಂಭು ನಂಬೂದಿರಿ ಶಾಲುಹೊದಿಸಿ ಸನ್ಮಾನಿಸಿದರು. ಪರಿಪೂರ್ಣ ಸಂಸ್ಥೆಯ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಬೂತ್ ಅಧ್ಯಕ್ಷ ನಿತಿನ್ ಮಾಡ ಮತ್ತು ಇನ್ ಚಾರ್ಜರ್ ಲೋಕೇಶ್ ಮಾಡ ಮತ್ತು ಹಲವಾರು ಕಾರ್ಯಕರ್ತರು ಶಾಲುಹೊದಿಸಿ ಅಭಿನಂದಿಸಿದರು. ಮುಖಂಡರಾದ ಸುರೇಶ್ ಶೆಟ್ಟಿ ಪರಂಕಿಲ, ಹರಿಶ್ಚಂದ್ರ ಮಂಜೇಶ್ವರ, ನವೀನ ಅಡಪ್ಪ, ಉಮೇಶ್ ಪೂಮಣ್ಣು, ಜಯಶ್ರೀ, ಲಕ್ಷ್ಮಣ್ ಕುಚ್ಚಿಕ್ಕಾಡ್ ಮತ್ತಿತರರು ಉಪಸ್ಥಿತರಿದ್ದರು. ಹರೀಶ್ ಶೆಟ್ಟಿ ಮಾಡ ನಿರೂಪಿಸಿದರು.