ಕಾಸರಗೋಡು: ಉದ್ಯೋಗ ವಿನಿಮಯ ಕಚೇರಿಯಲ್ಲಿ ನೋಂದಾವಣೆ ನಡೆಸಿದ, 2000ನೇ ಜನವರಿ ಒಂದರಿಂದ 2021 ಆಗಸ್ಟ್ 31ರ ವರೆಗಿನ ಕಾಲಾವಧಿಯಲ್ಲಿ ವಿವಿಧ ಕಾರಣಗಳಿಂದ ನೋಂದಾವಣೆ ನವೀಕರಿಸಲಾಗದೆ ಸೀನಿಯಾರಿಟಿ ಕಳೆದುಕೊಂಡಿರುವ ಉದ್ಯೋಗಾರ್ಥಿಗಳಿಗೆ ಈ ಹಿಂದಿನ ಸೀನಿಯಾರಿಟಿಯೊಂದಿಗೆ ನವೀಕರಿಸಲು ಅ. 1ರಿಂದ 30ರ ವರೆಗೆ ನೋಂಚಾವಣೆ ನವೀಕರಿಸಿ ನೀಡಲು ತೀರ್ಮಾನಿಸಲಾಗಿದೆ.
ಶಿಕ್ಷಣ ಕ್ರಮದ ಅಂಗವಾಗಿ ಯಾ ಉದ್ದೇಶಪೂರ್ವಕವಾಗಿ ಉದ್ಯೋಗಕ್ಕೆ ಹಾಜರಾಗದೆ ಸೀನಿಯಾರಿಟಿ ಕಳೆದುಕೊಂಡ ಅಭ್ಯರ್ಥಿಗಳ ನೋಂದಾವಣೆ ನವೀಕರಿಸಲಾಗದು ಎಂದೂ ತಿಳಿಸಲಾಗಿದೆ. ಅಲ್ಲದೆ, ನವೀಕರಿಸಲಾಗದ ಕಾಲಾವಧಿಯಲ್ಲಿನ ನಿರುದ್ಯೋಗ ವೇತನ ನಷ್ಟಗೊಂಡವರಿಗೆ, ನವೀಕರಣೆ ನಂತರ ಈ ಸವಲತ್ತೂ ಲಭ್ಯವಾಗದು. ಪ್ರತ್ಯೇಕ ನವೀಕರಣೆಯನ್ನು ಆನ್‍ಲೈನ್ ಪೋರ್ಟಲ್ ಆಗಿರುವ www.eemployment.kerala.gov.in ಮೂಲಕವೂ ನಡೆಸಬಹುದು ಎಂದು ಪ್ರಕಟಣೆ ತಿಳಿಸಿದೆ.