HEALTH TIPS

ದೆಹಲಿ ಮೆಟ್ರೊ ರೈಲು ಸೇವೆ: ಉಚಿತ ವೈಫೈಗೆ ಚಾಲನೆ

              ನವದೆಹಲಿ: ದೆಹಲಿಯಲ್ಲಿ ಮೆಟ್ರೊ ರೈಲು ಪ್ರಯಾಣಿಕರು ಇನ್ನು ಉಚಿತವಾಗಿ ಇಂಟರ್‌ನೆಟ್‌ ಸೇವೆ ಪಡೆಯಬಹುದು. ಹೈಸ್ಪೀಡ್‌ ಸಾಮರ್ಥ್ಯದ ವೈ-ಫೈ ಉಚಿತ ಸೇವೆಗೆ ಮೆಟ್ರೊ ರೈಲು ಸೇವೆಯ ಹಳದಿ ಮಾರ್ಗದಲ್ಲಿ ಆರಂಭಿಸಲಾಗಿದೆ ಎಂದು ಡಿಎಂಆರ್‌ಸಿ ಅಧಿಕಾರಿಗಳು ತಿಳಿಸಿದ್ದಾರೆ.

            ಈ ಹಿಂದೆ ಡಿಎಂಆರ್‌ಸಿಯು ಜನವರಿ 2020ರಲ್ಲಿ ನವದೆಹಲಿ ಮತ್ತು ದ್ವಾರ್ಕಾ ಸೆಕ್ಟರ್ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಕೋಚ್‌ ಒಳಗಡೆ ವೈ-ಫೈ ಸೌಲಭ್ಯ ಕಲ್ಪಿಸಿತ್ತು. ಒಂದು ವರ್ಷದ ಅವಧಿಯಲ್ಲಿಯೇ ಹಳದಿ ಮಾರ್ಗದಲ್ಲಿಯೂ ಈ ಸೌಲಭ್ಯವನ್ನು ವಿಸ್ತರಿಸಲಾಗಿದೆ.

            ದಕ್ಷಿಣ ಏಷಿಯಾ ವಲಯದಲ್ಲಿಯೇ ಯಾವುದೇ ದೇಶದಲ್ಲಿ ಇಂಥ ಸೌಲಭ್ಯ ಒದಗಿಸಿರುವ ಮೊದಲ ಮೆಟ್ರೊ ರೈಲು ಸೇವೆಯು ದೆಹಲಿಯದ್ದಾಗಿದೆ. 22.7 ಕಿ.ಮೀ. ಅಂತರದ ಈ ಮಾರ್ಗದಲ್ಲಿ ಒಟ್ಟು ಆರು ನಿಲ್ದಾಣಗಳು ಬರಲಿವೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries