ಕಾಸರಗೋಡು: ಬೆಳ್ಳೂರು ಗ್ರಾಮ ಪಂಚಾಯತ್ ನ ಮಹಾತ್ಮಾ ಗಾಂಧಿ ರಾಷ್ಟ್ರೀಯ ನೌಕರಿ ಖಾತರಿ ಯೋಜನೆ ಕಚೇರಿಯಲ್ಲಿ ಅಕ್ರೆಡಿಟೆಡ್ ಓವರ್ ಸೀಯರ್( ಒಂದು), ಅಕೌಂಟೆಂಟ್ ಕಂ ಐ.ಟಿ.ಅಸಿಸ್ಟೆಂಟ್( ಒಂದು) ಹುದ್ದೆಗಳು ಬರಿದಾಗಿವೆ. ಮೂರು ವರ್ಷಗಳ ಅವಧಿಯ ಪಾಲಿಟೆಕ್ನಿಕ್ ಸಿವಿಲ್ ಡಿಪೆÇ್ಲಮಾ/ ಮೂರು ವರ್ಷಗಳ ಅವಧಿಯ ಡ್ರಾಫ್ಟ್ ಮನ್ ಸಿವಿಲ್ ಡಿಪೆÇ್ಲಮಾ ಅಕ್ರೆಡಿಟೆಡ್ ಓವರ್ ಸೀಯರ್ ಹುದ್ದೆಯ ಅರ್ಹತೆಯಾಗಿದೆ. ಬಿ.ಕಾಂ ವಿದ್ ಪಿ.ಜಿ.ಡಿ.ಸಿ.ಎ. ಅಕೌಂಟೆಂಟ್ ಹುದ್ದೆಯ ಅರ್ಹತೆಯಾಗಿದೆ. ಓವರ್ ಸೀಯರ್ ನೇಮಕ ಸಂಬಂಧ ಸಂದರ್ಶನ ನ.8ರಂದು ಬೆಳಗ್ಗೆ , ಅಕೌಂಟೆಂಟ್ ಹುದ್ದೆಯ ನೇಮಕ ಸಂಬಂಧ ಸಂದರ್ಶನ ಅಂದು ಮಧ್ಯಾಹ್ನ 2 ಗಂಟೆಗೆ ಪಂಚಾಯತ್ ಸಭಾಂಗಣದಲ್ಲಿ ಜರುಗಲಿದೆ. ದೂರವಾಣಿ ಸಂಖ್ಯೆ: 04994-260073.