ಕುಂಬಳೆ: ಮಿಲಾದುನ್ನಬಿ ದಿನಾಚರಣೆಯ ಅಂಗವಾಗಿ ಪುತ್ತಿಗೆ ಮುಹಿಮ್ಮತ್ ಸಂಸ್ಥೆಯ ನೇತೃತ್ವದಲ್ಲಿ ಕಾಸರಗೋಡು ಜರಲ್ ಆಸ್ಪತ್ರೆ ಹಾಗೂ ಟಾಟಾ ಕೋವಿಡ್ ಆರೈಕೆ ಕೇಂದ್ರಗಳಿಗಳಲ್ಲಿ ಸೇವಾ ಚಟುವಟಿಕೆ ನಡೆಯಿತು.
ಮುಹಿಮ್ಮತ್ ಮದ್ ಹುರ್ ರಸೂಲ್ ಫೌಂಡೇಶನ್ ನ ಕಾರುಣ್ಯ ಸ್ಪರ್ಶ ಕಾರ್ಯಕ್ರಮದಡಿ ಪ್ರವಾದಿ ಮುಹಮ್ಮದ್ ಅವರ ಜನ್ಮದಿನದ ಸಂತಸವನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವ ರೋಗಿಗಳೊಂದಿಗೆ ಗಂಟೆಗಳ ಕಾಲ ಕಳೆದ ನಂತರ, ಮುಹಿಮ್ಮತ್ ಅವರ ಕಾರ್ಯಕರ್ತರು ಪವಿತ್ರ ಪ್ರವಾದಿ (ಸ) ರ ಕರುಣೆಯ ಸಂದೇಶವನ್ನು ರವಾನಿಸಿದರು ಮತ್ತು ಎಲ್ಲಾ ರೋಗಿಗಳಿಗೆ ಮತ್ತು ಅವರ ಜೊತೆಗಿದ್ದವರಿಗೆ ಹಣ್ಣಿನ ಕಿಟ್ ಗಳನ್ನು ನೀಡಿದರು.
ಮುಹಿಮ್ಮತ್ ಪ್ರಧಾನ ಕಾರ್ಯದರ್ಶಿ ಬಿಎಸ್ ಅಬ್ದುಲ್ಲಾ ಕುಂಞÂ ಫೈಜಿ ಉದ್ಘಾಟಿಸಿದರು. ಜನರಲ್ ಆಸ್ಪತ್ರೆ ಸಹಾಯಕ ಅಧೀಕ್ಷಕ ಡಾ. ರಾಜಾರಾಮ್ ಕೊಡುಗೆಗಳನ್ನು ಸ್ವೀಕರಿಸಿದರು. ನಸಿರ್ಂಗ್ ಅಧೀಕ್ಷಕಿ ಕಮಲಾಕ್ಷಿ, ಸಿಬ್ಬಂದಿ ನರ್ಸ್ ಮಿನಿ ಜೋಸೆಫ್ ಮತ್ತು ಡಾ ಅಬ್ದುಲ್ ಸತ್ತಾರ್ ಮುಖ್ಯ ಭಾಷಣ ಮಾಡಿದರು.
ಮುಹಿಮ್ಮತ್ ಖಜಾಂಚಿ ಹಾಜಿ ಅಮ್ಮಿರಲಿ ಚೂರಿ ಟಾಟಾ ಕೋವಿಡ್ ಆಸ್ಪತ್ರೆಯಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮೇಲ್ವಿಚಾರಕಿ ಡಾ.ಗೀತಾ ಅಧ|ಯಕ್ಷತೆ ವಹಿಸಿದರು. ಡಾ.ಅಬೂಬಕರ್ ಮಾತನಾಡಿದರು. ಮೂಸಾ ಸಖಾಫಿ ಕಳತ್ತೂರು ಸ್ವಾಗತಿಸಿದರು. ಮುಹಿಮ್ಮತ್ ಮಿಲಾದುನ್ನಬಿಯ ಅಂಗವಾಗಿ ಹಲವು ವರ್ಷಗಳಿಂದ ಮುಹಿಮ್ಮತ್ ಸಂಸ್ಥೆ ಆಸ್ಪತ್ರೆಯಲ್ಲಿ ಸೇವಾ ಚಟುವಟಿಕೆಗಳನ್ನು ಒದಗಿಸುತ್ತಿದೆ. ಮಹಿಳೆಯರ ವಾರ್ಡ್ ನ್ನು ನವೀಕರಿಸುವುದರ ಜೊತೆಗೆ, ವಿವಿಧ ವೈದ್ಯಕೀಯ ಸಲಕರಣೆಗಳನ್ನು ಒದಗಿಸಲಾಗಿದೆ.