ಕಾಸರಗೋಡು: ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಜಿಲ್ಲಾ ಕಚೇರಿ ವತಿಯಿಂದ ಜರುಗಿದ ಗಾಂಧಿ ಜಯಂತಿ ಸಪ್ತಾಹದ ಸಮಾರೋಪ ಸಮಾರಂಭ ಮತ್ತು ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಜಿಲ್ಲಾ ವಾರ್ತಾ ಕಚೇರಿಯ ಪಿ.ಆರ್ ಚೇಂಬರ್ ನಲ್ಲಿ ಜರುಗಿತು.
ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್‍ವೀರ್ ಚಂದ್ ಉದ್ಘಾಟಿಸಿದರು. 'ಪತ್ರಕರ್ತರಾಗಿ ಗಾಂಧೀಜಿ' ಎಂಬ ವಿಷಯದಲ್ಲಿ ಸಾಹಿತಿ ಕೆ.ವಿ.ರಾಘವನ್ ಉಪನ್ಯಾಸ ನಡೆಸಿದರು. ಜಿಲ್ಲಾ ವಾರ್ತಾಧಿಕಾರಿ ಮಧುಸೂದನನ್ ಎಂ. ಅಧ್ಯಕ್ಷತೆ ವಹಿಸಿದ್ದರು. ಪೆÇ್ರ.ವಿ.ಗೋಪಿನಾಥ್, ಕಾಸರಗೋಡು ಪ್ರೆಸ್ ಕ್ಲಬ್ ಅಧ್ಯಕ್ಷ ಮುಹಮ್ಮದ್ ಹಾಶಿಂ ಉಪಸ್ಥಿತರಿದ್ದರು. ವಾರ್ತಾ ಕಚೇರಿಯ ಸಹಾಯಕ ಸಂಪಾದಕ ಪಿ.ಪಿ.ವಿನೀಷ್ ಸ್ವಾಗತಿಸಿದರು. ಸಹಾಯಕ ಮಾಹಿತಿ ಅಧಿಕಾರಿ ಜಿ.ಎನ್.ಪ್ರದೀಪ್ ವಂದಿಸಿದರು.