HEALTH TIPS

ಕೊರೊನಾ: ರಾಜ್ಯದಲ್ಲಿ ಇಂದು 13,834 ಮಂದಿಗೆ ಸೋಂಕು ಪತ್ತೆ: 1,೦5,368 ಮಾದರಿಗಳ ಪರೀಕ್ಷೆ


                ತಿರುವನಂತಪುರಂ:  ಕೇರಳದಲ್ಲಿ ಇಂದು ೧೩,೮೩೪ ಮಂದಿ ಜನರಿಗೆ ಕೊರೋನಾ ದೃಢಪಟ್ಟಿದೆ. ತ್ರಿಶೂರ್ ೧೮೨೩, ಎರ್ನಾಕುಳಂ ೧೮೧೨, ತಿರುವನಂತಪುರ ೧೪೬೪, ಕೋಝಿಕ್ಕೋಡ್ ೧೨೯೧, ಕೊಲ್ಲಂ ೧೧೩೧, ಮಲಪ್ಪುರಂ ೧೧೨೫, ಕೊಟ್ಟಾಯಂ ೮೯೬, ಪತ್ತನಂತಿಟ್ಟ ೮೫೮, ಆಲಪ್ಪುಳ ೮೧೧, ಕಣ್ಣೂರು ೭೪೪, ಪಾಲಕ್ಕಾಡ್ ೬೮೩, ಇಡುಕ್ಕಿ ೬೭೧, ವಯನಾಡ್ ೩೩೯ ಮತ್ತು ಕಾಸರಗೋಡು ೧೮೬ ಎಂಬAತೆ ಕೋವಿಡ್ ದೃಢಪಡಿಸಲಾಗಿದೆ.
                  ಕಳೆದ ೨೪ ಗಂಟೆಗಳಲ್ಲಿ ೧,೦೫,೩೬೮ ಮಾದರಿಗಳನ್ನು ಪರೀಕ್ಷಿಸಲಾಗಿದೆ. ಸಾಪ್ತಾಹಿಕ ಸೋಂಕಿನ ಜನಸಂಖ್ಯೆ ಅನುಪಾತವು ೧೦ ಕ್ಕಿಂತ ಹೆಚ್ಚಿನ ೩೬೮ ಸ್ಥಳೀಯ ಸಂಸ್ಥೆಗಳಲ್ಲಿ ೭೪೫ ವಾರ್ಡ್ಗಳಲ್ಲಿವೆ. ಇಲ್ಲಿ ಕಠಿಣ ನಿಯಂತ್ರಣ ಇರುತ್ತದೆ. ಪ್ರಸ್ತುತ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ೪,೪೦,೧೯೪ ಮಂದಿ ಜನರು ಕಣ್ಗಾವಲಿನಲ್ಲಿ ಇದ್ದಾರೆ. ಇವುಗಳಲ್ಲಿ ೪,೨೨,೨೧೮ ಮಂದಿ ಮನೆ / ಸಾಂಸ್ಥಿಕ ಕ್ವಾರಂಟೈನ್ ಮತ್ತು ೧೭,೯೭೬ ಮಂದಿ ಆಸ್ಪತ್ರೆಗಳಲ್ಲಿದ್ದಾರೆ. ಒಟ್ಟು ೧೨೨೨ ಮಂದಿ ಜನರನ್ನು ಹೊಸದಾಗಿ ಆಸ್ಪತ್ರೆಗೆ ಸೇರಿಸಲಾಗಿದೆ.
              ಪ್ರಸ್ತುತ ೧,೪೨,೪೯೯ ಕೊರೋನಾ ಪ್ರಕರಣಗಳಲ್ಲಿ, ಕೇವಲ ೧೧.೫ ಪ್ರತಿಶತದಷ್ಟು ಜನರು ಮಾತ್ರ ಆಸ್ಪತ್ರೆ / ಸ್ಥಳೀಯ ಆಸ್ಪತ್ರೆಗಳಲ್ಲಿದ್ದಾರೆ. ಕಳೆದ ೨೪ ಗಂಟೆಗಳಲ್ಲಿ ೯೫ ಮಂದಿ ಕೋವಿಡ್ ಬಾಧಿಸಿ ಮೃತಪಟ್ಟಿದ್ದಾರೆ. ಒಟ್ಟು ಸಾವಿನ ಸಂಖ್ಯೆ ೨೫,೧೮೨ ಕ್ಕೆ ಏರಿಕೆಯಾಗಿದೆ.
          ಇಂದು, ಸೋಂಕು ಪತ್ತೆಯಾದವರಲ್ಲಿ ೭೪ ಮಂದಿ ರಾಜ್ಯದ ಹೊರಗಿಂದ ಬಂದವರು. ೧೩,೧೩೮ ಮಂದಿ ಜನರು ಸಂಪರ್ಕದ ಮೂಲಕ ಸೋಂಕಿಗೆ ಒಳಗಾಗಿದ್ದಾರೆ. ೫೫೨ ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಇಂದು ೭೦ ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ದೃಢಪಡಿಸಲಾಗಿದೆ.
           ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದವರಲ್ಲಿ, ೧೩,೭೬೭ ಮಂದಿ ಚೇತರಿಸಿಕೊಂಡಿದ್ದಾರೆ. ತಿರುವನಂತಪುರ ೮೨೧, ಕೊಲ್ಲಂ ೯೨, ಪತ್ತನಂತಿಟ್ಟ ೫೯೨, ಅಲಪ್ಪುಳ ೧೪೫೨, ಕೊಟ್ಟಾಯಂ ೧೩೧೮, ಇಡುಕ್ಕಿ ೩೮೯, ಎರ್ನಾಕುಳಂ ೧೫೦೦, ತ್ರಿಶೂರ್ ೨೨೦೩, ಪಾಲಕ್ಕಾಡ್ ೯೨೯, ಮಲಪ್ಪುರಂ ೧೨೨೮, ಕೋಝಿಕ್ಕೋಡ್ ೧೪೧೮, ವಯನಾಡ್ ೫೭೭, ಕಣ್ಣೂರು ೯೮೩ ಮತ್ತು ಕಾಸರಗೋಡು ೨೬೫ ಎಂಬAತೆ ಗುಣಮುಖರಾಗಿದ್ದಾರೆ. ಇದರೊಂದಿಗೆ, ೧,೪೨,೪೯೯ ಮಂದಿ ಜನರಿಗೆ ಕೋವಿಡ್ ಇರುವುದು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ ೪೫,೨೬,೪೨೯ ಮಂದಿ ಜನರನ್ನು ಕೊರೋನಾದಿಂದ ಮುಕ್ತಗೊಳಿಸಲಾಗಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries