HEALTH TIPS

ಕೋವಿಡ್ ಬೂಸ್ಟರ್ ಡೋಸ್ ಬಗ್ಗೆ ಯೋಚನೆ ಹೊಂದಿಲ್ಲ: ನೀತಿ ಆಯೋಗ

              ನವದೆಹಲಿ: ಈಗಿನ ಪರಿಸ್ಥಿತಿಯಲ್ಲಿ ದೇಶದಲ್ಲಿ ಕೋವಿಡ್-19 ಸೋಂಕಿಗೆ ಬೂಸ್ಟರ್ ಡೋಸ್ ನೀಡುವ ಕುರಿತು ಯಾವುದೇ ಯೋಜನೆ ಹೊಂದಿಲ್ಲ ಎಂದು ನೀತಿ ಆಯೋಗ ಹೇಳಿದೆ.

            ಸರ್ಕಾರದ ಮುಖ್ಯ ಕೋವಿಡ್-19 ಸಲಹೆಗಾರರಾಗಿರುವ ಡಾ. ವಿನೋದ್ ಕೆ. ಪಾಲ್ ಅವರು, ಭಾರತವು 100 ಕೋಟಿ ಲಸಿಕೆ ನೀಡಿಕೆಯತ್ತ ಸಾಗುತ್ತಿದೆ. ಲಸಿಕೆ ಉತ್ಪಾದನೆ ಹೆಚ್ಚಿಸಲಾಗಿದೆ. ಹೀಗಾಗಿ ಬೂಸ್ಟರ್ ಡೋಸ್ ಪ್ರಸ್ತಾಪವಿಲ್ಲ ಎಂದು ಹೇಳಿದ್ದಾರೆ.

             ಈಗ ದೇಶಕ್ಕೆ ಅಗತ್ಯವಿರುವಷ್ಟು ಪ್ರಮಾಣದಲ್ಲಿ ಲಸಿಕೆ ಉತ್ಪಾದನೆಯಾಗುತ್ತಿದ್ದು, ಇಲ್ಲಿ ಬಳಕೆಗೆ ಲಭ್ಯವಾದ ಬಳಿಕ, ಮುಂದಿನ ವರ್ಷದಿಂದ ರಫ್ತು ಮಾಡುವ ಗುರಿ ಇದೆ ಎಂದು ಡಾ. ವಿನೋದ್ ತಿಳಿಸಿದ್ದಾರೆ.

             ಈಗಾಗಲೇ ಜಾಗತಿಕವಾಗಿ ಇಸ್ರೇಲ್, ಫ್ರಾನ್ಸ್, ಇಟಲಿ ಮತ್ತು ಜರ್ಮನಿ ಸಹಿತ 15ಕ್ಕೂ ಅಧಿಕ ರಾಷ್ಟ್ರಗಳು ಹಿರಿಯ ನಾಗರಿಕರಿಗೆ ಕೋವಿಡ್ 19 ತಡೆಗೆ ಮೂರನೇ ಡೋಸ್ ಲಸಿಕೆ ನೀಡಲಾರಂಭಿಸಿವೆ.

           ಆದರೆ ವಿಶ್ವ ಆರೋಗ್ಯ ಸಂಸ್ಥೆಯ ಸೂಚನೆ ಪ್ರಕಾರ, ಮೂರನೇ ಡೋಸ್ ಲಸಿಕೆ ನೀಡುವ ಕುರಿತಂತೆ ಯಾವುದೇ ಸ್ಪಷ್ಟ ಅಧಿಸೂಚನೆ ಲಭ್ಯವಾಗಿಲ್ಲ, ಹೀಗಾಗಿ ದೇಶದಲ್ಲಿ ಬೂಸ್ಟರ್ ಡೋಸ್ ಲಸಿಕೆ ನೀಡುವ ಬಗ್ಗೆ ಯೋಜನೆ ರೂಪಿಸಿಲ್ಲ ಎಂದು ನೀತಿ ಆಯೋಗ ಹೇಳಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries