ಸಮರಸ ಚಿತ್ರ ಸುದ್ದಿ: ಕುಂಬಳೆ: ಕುಂಬಳೆಯ ಶ್ರೀ ವೀರ ವಿಠ್ಠಲ ದೇವಸ್ಥಾನದ ನೇತೃತ್ವದಲ್ಲಿ ಕುಂಬಳೆ ಜಿ ಎಸ್ ಬಿ ಸಮಾಜದ ವತಿಯಿಂದ ಕೊಚ್ಚಿಯ ತಿರುಮಲ ದೇವಸ್ಥಾನದಲ್ಲಿ ಚಾತುರ್ಮಾಸ ವ್ರತದಲ್ಲಿರುವ ಶ್ರೀ ಕಾಶಿ ಮಠದ ಶ್ರೀಮತ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರನ್ನು ಭೇಟಿ ಮಾಡಿ ಚಾತುರ್ಮಾಸ ಕಾಣಿಕೆಯನ್ನು ಸಮರ್ಪಣೆ ಮಾಡಿ ಸ್ವಾಮೀಜಿಯವರ ಆಶೀರ್ವಾದ ಪಡೆಯಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು, ಮುಖ್ಯ ಅರ್ಚಕರು ಹಾಗೂ ಭಜಕರು ಉಪಸ್ಥಿತರಿದ್ದರು.