ಪೆರ್ಲ: ಪೆರ್ಲ ಪೂವನಡ್ಕ ರಸ್ತೆಗೆ ಮೆಕ್ಕಡಂ ಡಾಮಾರೀಕರಣ ಹಾಗೂ ಬಜಕೂಡ್ಲು ಅಂಗನವಾಡಿಯನ್ನು ಹೈಟೆಕ್ ಮಾಡಬೇಕು ಎಂದು 23ನೇ ಪಾರ್ಟಿ ಕಾಂಗ್ರೆಸ್ ಸಿಪಿಐಎಂ ಬಜಕೂಡ್ಲು ಬ್ರಾಂಚ್ ಸಮ್ಮೇಳನ ಠರಾವು ಮಂಡಿಸಿದೆ.
ಇತ್ತೀಚೆಗೆ ಕುರೆಡ್ಕದ ಕೆ.ಪಿ.ಮದನ ಮಾಸ್ತರ್ ನಗರದಲ್ಲಿ ಜರಗಿದ ಸಮ್ಮೇಳನವನ್ನು ಕುಂಬಳೆ ಏರಿಯಾ ಸಮಿತಿ ಸದಸ್ಯ ವಿಠಲ್ ರೈ ಉದ್ಘಾಟಿಸಿದರು. ಪಕ್ಷದ ಹಿರಿಯ ಕಾರ್ಯಕರ್ತ ದೇವಪ್ಪ ನಾಯ್ಕ ನಾಗೋಡಿ ಧ್ವಜಾರೋಹಣಗೈದರು. ರಾಮಕೃಷ್ಣ ರೈ, ಹನೀಫ್ ನಡುಬೈಲ್, ವೈ ನಾರಾಯಣ,ಸದಾನಂದ ಕುಲಾಲ್ ಮೊದಲಾದವರು ಭಾಗವಹಿಸಿದರು.
ಅಭಿನಂದನೆ: ಸಮ್ಮೇಳನದಲ್ಲಿ ಈ ಬಾರಿಯ ಎಸ್ಸಸ್ಸೆಲ್ಸಿ ಪರೀಕ್ಷೆಯ ಎಲ್ಲಾ ವಿಭಾಗದಲ್ಲಿ ಎಪ್ಲಸ್ ಅಂಕ ಗಳಿಸಿದ ಪ್ರಜ್ವಲ್ ಹಾಗೂ ರಾಜ್ಯ ಮಟ್ಟದ ಸಂಸ್ಕøತ ಪ್ರತಿಭೆ ದಿಶಾ ರಾಜೇಶ್ ಕುಲಾಲ್ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು. 50 ಮಂದಿ ಹಿರಿಯ ಕಾರ್ಯಕರ್ತರನ್ನು ಸಮ್ಮೇಳನದಂಗವಾಗಿ ಅಭಿನಂದಿಸಲಾಯಿತು. ನೂತನ ಸಮಿತಿ ಕಾರ್ಯದರ್ಶಿಯಾಗಿ ಸೌಧಾಬಿ ಹನೀಫ್ ಸರ್ವಾನುಮತದಿಂದ ಆಯ್ಕೆಯಾದರು.