ಕುಂಬಳೆ: ರಾಜ್ಯ ಸರ್ಕಾರದ ಸುಭಿಕ್ಷ ಕೇರಳ ಯೋಜನೆಯ ಭಾಗವಾಗಿ ಕೊಡ್ಯಮೆ ಸಿಎಚ್. ಮುಹಮ್ಮದ್ ಕೋಯ ಸ್ಮಾರಕ ಗ್ರಂಥಾಲಯದ ನೇತೃತ್ವದಲ್ಲಿ, ಚತ್ರಂಪಳ್ಳ ಕೆರೆಯಲ್ಲಿ ಮೀನು ಕೃಷಿಗೆ ಸಂಬಂಧಿಸಿ ಮರಿಗಳನ್ನು ಬಿಡಲಾಯಿತು.
ಜಿಲ್ಲಾ ಗ್ರಂಥಾಲಯ ಕಾರ್ಯಕಾರಿ ಸಮಿತಿ ಸದಸ್ಯ ಕೆ.ಟಿ.ವಿಜಯನ್ ಉದ್ಘಾಟಿಸಿದರು. ಗ್ರಂಥಾಲಯದ ಅಧ್ಯಕ್ಷ ಅಶ್ರಫ್ ಕೊಡ್ಯಮೆ, ಕಾರ್ಯದರ್ಶಿ ಮೊಹಮ್ಮದ್ ರಫೀಕ್, ಅಬ್ಬಾಸ್ ಅಲಿ ಕೆ, ಮೊಹಮ್ಮದ್ ಖಾದರ್, ಜುನೈದ್ ಪರಪ್ಪನಂಗಡಿ, ಸಿದ್ದೀಕ್, ನಿಜಾಮುದ್ದೀನ್, ಅಬ್ಬಾಸ್ ಚೂರಿತ್ತಡ್ಕ, ಮಮ್ಮುಞÂ್ಞ ಪುದಿಯಪುರ, ಮೊಹಮ್ಮದ್ ಕುಂಞÂ್ಞ ಉಳುವಾರ್ ಮತ್ತು ಫೈಸಲ್ ಉಪಸ್ಥಿತರಿದ್ದರು.