ಮಂಜೇಶ್ವರ: ಇತಿಹಾಸ ಪ್ರಸಿದ್ದ ಉದ್ಯಾವರ ಸಾವಿರ ಜಮಾಅತ್ ಖಿದ್ಮತುಲ್ ಇಸ್ಲಾಮ್ ಸಮಿತಿ ನೇತೃತ್ವದಲ್ಲಿ ಶ್ರದ್ದಾ ಭಕ್ತಿಯೊಂದಿಗೆ ಈದ್ ಮಿಲಾದ್ ಆಚರಿಸಲಾಯಿತು.
ಅಸಯ್ಯದ್ ಶಹೀದ್ ವಲಿಯುಲ್ಲಾಯಿ ರವರ ದರ್ಗಾ ಶೆರೀಫ್ ನಲ್ಲಿ ನಡೆದ ಪ್ರಾರ್ಥನೆಯ ಬಳಿಕ ಮಸೀದಿ ಅಧ್ಯಕ್ಷ ಸೈಫುಲ್ಲಾ ತಂಙಳ್ ರವರು ಧ್ವಜಾರೋಹಣ ಗೈಯುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಬಳಿಕ ಉದ್ಯಾವರ ಸಾವಿರ ಜಮಾಅತ್ ಖತೀಬ್ ಅಬ್ದುಲ್ ಕರೀಂ ಧಾರಿಮಿಯವರು ಮಸೀದಿ ಅಧ್ಯಕ್ಷರಿಗೆ ಧ್ವಜವನ್ನು ಹಸ್ತಾಂತರಿಸುವುದರೊಂದಿಗೆ ಈದ್ ಮಿಲಾದ್ ರ್ಯಾಲಿಗೆ ಚಾಲನೆ ದೊರಕಿತು. ಉದ್ಯಾವರ ಜಮಾಅತಿನ ಅಧೀನದಲ್ಲಿರುವ 13 ಮೊಹಲಾಗಳನ್ನೊಳಗೊಂಡ ಮದ್ರಸ ವಿದ್ಯಾರ್ಥಿಗಳ ಘೋಷಯಾತ್ರೆಯು ಶಾಂತಯುತವಾಗಿ ನಡೆದು ಜನರ ಮೆಚ್ಚುಗೆಗೆ ಪಾತ್ರವಾಯಿತು.
ಸಮಿತಿಯ ಪ್ರ. ಕಾರ್ಯದರ್ಶಿ ಇಬ್ರಾಹಿಂ ಬಟರ್ ಫ್ಲೈ, ಪದಾಧಿಕಾರಿಗಳಾದ ಬಶೀರ್ ಎಸ್ ಎಂ, ಮುಸ್ತಫಾ ಉದ್ಯಾವರ, ಅಬೂಬಕ್ಕರ್ ಮಾಹಿನ್, ಮೊಯಿದಿನಬ್ಬ, ಅಬ್ದುಲ್ಲ, ಆಲಿ ಕುಟ್ಟಿ, ಮೊಯಿದ್ದೀನ್ ಮೊದಲಾದವರು ಜಾಥಾಕ್ಕೆ ನೇತೃತ್ವ ನೀಡಿದರು.ಮಂಜೇಶ್ವರದ ವಿವಿಧೆಡೆ ಶ್ರದ್ದಾ ಭಕ್ತಿಯೊಂದಿಗೆ ಈದ್ ಮಿಲಾದ್ ಆಚರಿಸಲಾಯಿತು. ಕೇರಳ ಕರ್ನಾಟಕ ಗಡಿ ಪ್ರದೇಶವಾದ ತೂಮಿನಾಡು ಅಲ್ ಫತಾಃ ಜುಮಾ ಮಸೀದಿ ಹಾಗೂ ಸಿರಾಜುಲ್ ಇಸ್ಲಾಂ ಸಮಿತಿ ನೇತೃತ್ವದಲ್ಲಿ ಶ್ರದ್ದಾ ಭಕ್ತಿಯೊಂದಿಗೆ ಈದ್ ಮಿಲಾದ್ ಆಚರಿಸಲಾಯಿತು. ಸಮಿತಿ ಅಧ್ಯಕ್ಷ ಎ ಆರ್ ಅಬ್ದುಲ್ ರಹ್ಮಾನ್ ಧ್ವಜರೋಹಣಗೈಯುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಳಿಕ ವಿದ್ಯಾರ್ಥಿಗಳ ಮೆರವಣಿಗೆ ನಡೆಯಿತು.