ಕಾಸರಗೋಡು: ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ವತಿಯಿಂದ ಕೇರಳ ರಾಜ್ಯ ಅತ್ಯುತ್ತಮ ಅಧ್ಯಾಪಕ ಪ್ರಶಸ್ತಿ ವಿಜೇತ ನಾರಾಯಣ ದೇಲಂಪಾಡಿ ಇವರನ್ನು ಗೌರವಿಸಲಾಯಿತು.
ಕಾಸರಗೋಡು ಕನ್ನಡ ಅಧ್ಯಾಪಕ ಭವನದಲ್ಲಿ ನಡೆದ ಸಮಾರಂಭದಲ್ಲಿ ಅಧ್ಯಾಪಕ ಸಂಘದ ಅಧ್ಯಕ್ಷ ರವೀಂದ್ರನಾಥ್.ಕೆ.ಆರ್, ಕಾರ್ಯದರ್ಶಿ ಕುಮಾರಸುಬ್ರಹ್ಮಮಣ್ಯ,
ಸಂಘಟನಾ ಕಾರ್ಯದರ್ಶಿ ಪ್ರದೀಪ್ ಕುಮಾರ್, ಉಪಜಿಲ್ಲಾ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು, ಕಸಾಪ ಜಿಲ್ಲಾಧ್ಯಕ್ಷ ಎಸ್.ವಿ.ಭಟ್, ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಯತೀಶ್ ಕುಮಾರ್ ರೈ ಮೊದಲಾದವರು ಉಪಸ್ಥಿತರಿದ್ದರು.