ಸಮರಸ ಚಿತ್ರ ಸುದ್ದಿ: ಕಾಸರಗೋಡು: ಕೊರೊನಾ ಮಹಾಮಾರಿ ಸಂದರ್ಭದಲ್ಲಿ ರಾತ್ರಿ ಹಗಲೆನ್ನದೆ ನಿರಂತರವಾಗಿ ಸೇವೆ ಸಲ್ಲಿಸಿದ ಕೊರೊನಾ ವಾರಿಯರ್ ಆ್ಯಂಬುಲೆನ್ಸ್ ಚಾಲಕ ಕೊರುವೈಲ್ ನಿವಾಸಿ ಬಿ.ಎಂ.ಅಜಿತ್ ಕುಮಾರ್ ಅವರನ್ನು ಆಲ್ ಕೇರಳ ಫೆÇೀಟೋಗ್ರಾಫರ್ಸ್ ಅಸೋಸಿಯೇಶನ್ ಕಾಸರಗೋಡು ಯೂನಿಟ್ ನೇತೃತ್ವದಲ್ಲಿ ಶಾಲು ಹೊದಿಸಿ ಸ್ಮರಣಿಕೆ ನೀಡಿ ಸಮ್ಮಾನಿಸಿ ಗೌರವಿಸಲಾಯಿತು.