ಕಾಸರಗೋಡು: ಚಿನ್ಮಯ ವಿದ್ಯಾಲಯದ ಸುವರ್ಣಮಹೋತ್ಸವ ಅಂಗವಾಗಿ ಚಿನ್ಮಯ ವಿದ್ಯಾಲಯ ವಿದ್ಯಾನಗರ ಕ್ಯಾಂಪಸ್‍ನಲ್ಲಿ ಔಷಧೀಯ ಸಸ್ಯಗಳನ್ನು ನೆಟ್ಟು ಬೆಳೆಸುವ ಯೋಜನೆಗೆ ಚಾಲನೆ ನೀಡಲಾಯಿತು. ದೈನಂದಿನ ಜೀವನಕ್ಕೆ ಅಗತ್ಯವಿರುವ ಹಾಗೂ ಪರಿಸರದಲ್ಲಿ ಕಂಡುಬರುವ ಔಷಧೀಯ ಗುಣವುಳ್ಳ ಸಸ್ಯಗಳನ್ನು ಒಂದೆಡೆ ನೆಟ್ಟು ಪೋಷಿಸುವ ನಿಟ್ಟಿನಲ್ಲಿ ಯೋಜನೆ ಕೈಗೊಳ್ಳಲಾಗಿದೆ.
ಜ್ಯೋತಿಷ್ಯಕ್ಕನುಸಾರವಾಗಿ ಪ್ರತಿ ನಕ್ಷತ್ರಕ್ಕೆ ಒಂದು ಸಸಿಯನ್ನು ಗುರುತಿಸಲಾಗಿದ್ದು, ಈ ರೀತಿಯ ನಕ್ಷತ್ರ ವನವನ್ನು ಕ್ಯಾಂಪಸ್‍ನೊಳಗೆ ಈಗಾಗಲೇ ನೆಟ್ಟು ಬೆಳೆಸಲಾಗಿದೆ. ಪ್ರಸಕ್ತ ಪ್ರಾಚೀನ ಔಷಧೀಯ ಸಸ್ಯಗಳನ್ನು ಮುಂದಿನ ತಲೆಮಾರಿಗೆ ಪರಿಚಯಿಸುವ ನಿಟ್ಟಿನಲ್ಲಿ ಉದ್ಯಾನ ಆರಂಭಿಸಲಾಗುತ್ತಿದೆ. ಪರಿಸರ ತಜ್ಞ ಭಾಸ್ಕರ ವೆಲ್ಲೂರ್ ಸಸ್ಯವನ ಉದ್ಘಾಟಿಸಿದರು. ಚಿನ್ಮಯ ವಿದ್ಯಾಲಯದ ಮುಖ್ಯಸ್ಥ ಸ್ವಮಿ ವಿವಿಕ್ತಾನಂದ ಸರಸ್ವತಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲೆ ಸಂಗೀತಾ ಪ್ರಭಾಕರನ್, ಉಪ ಪ್ರಾಂಶುಪಾಲೆ ಪದ್ಮಾವತೀ, ಅಧ್ಯಾಪಕರಾದ ರಾಮ್‍ಗಣೇಶ್, ಸ್ವಪ್ನಾ, ಸುಪ್ರೇಮಿ, ರತೀಶ್‍ಕುಮಾರ್, ಶೀನಾ, ಪಾವನ ಉಪಸ್ಥಿತರಿದ್ದರು.