HEALTH TIPS

ತವಾಂಗ್ ನಲ್ಲಿ ಚೀನಾ-ಭಾರತ ಸೇನಾ ಪಡೆಗಳ ನಡುವೆ ಘರ್ಷಣೆ

Top Post Ad

Click to join Samarasasudhi Official Whatsapp Group

Qries

      ಅರುಣಾಚಲ ಪ್ರದೇಶ: ಲಡಾಖ್ ಘರ್ಷಣೆಯ ನಂತರ ಅರುಣಾಚಲ ಪ್ರದೇಶದಲ್ಲಿ ಚೀನಾ ಕ್ಯಾತೆ ತೆಗೆದಿದ್ದು, ಈ ಭಾಗದ ತವಾಂಗ್ ನ ಯಾಂಗ್ಸೆಯಲ್ಲಿ ಭಾರತ-ಚೀನಾ ಸೇನಾಪಡೆಗಳ ನಡುವೆ ಘರ್ಷಣೆ ಉಂಟಾಗಿದ್ದು ಈಗ ಬಹಿರಂಗಗೊಂಡಿದೆ. 

        ಸ್ಥಳೀಯ ಕಮಾಂಡರ್ ಗಳ ನಡುವಿನ ಮಾತುಕತೆ ವೇಳೆ ಈ ಸಂಘರ್ಷದ ಪರಿಸ್ಥಿತಿ ತಿಳಿಯಾಗಿದ್ದು ಬಗೆಹರಿದಿದೆ ಎಂದು ಬೆಳವಣಿಗೆಗಳ ಬಗ್ಗೆ ಮಾಹಿತಿ ಇರುವ ಮಂದಿ ಅ.08 ರಂದು ಮಾಹಿತಿ ನೀಡಿದ್ದಾರೆ. 

        ಚೀನಾದ ಪಿಎಲ್ಎ ಸಿಬ್ಬಂದಿಗಳು ಭಾರತೀಯ ಪ್ರಾಂತ್ಯವನ್ನು ಅಕ್ರಮವಾಗಿ ಪ್ರವೇಶಿಸಲು ಯತ್ನಿಸಿದಾಗ ಭಾರತೀಯ ಸೇನಾ ಸಿಬ್ಬಂದಿಗಳು ಚೀನಾ ಸೇನೆಯನ್ನು ಹಿಮ್ಮೆಟ್ಟಿಸುವಾಗ ಈ ಸಂಘರ್ಷ ಉಂಟಾಗಿದೆ. 

       ಈಶಾನ್ಯ ಲಡಾಖ್ ವಿವಾದಕ್ಕೆ ಸಂಬಂಧಿಸಿದಂತೆ ಮತ್ತೊಂದು ಸುತ್ತಿನ ಉನ್ನತ ಮಟ್ಟದ ಸೇನಾ ಸಭೆ ನಡೆದ ಬಳಿಕ ಅರುಣಾಚಲ ಪ್ರದೇಶದಲ್ಲಿನ ಬೆಳವಣಿಗೆ ಬಗೆಗಿನ ಮಾಹಿತಿ ಬಹಿರಂಗಗೊಂಡಿದೆ. 

        ಅರುಣಾಚಲ ಪ್ರದೇಶದಲ್ಲಿನ ಬೆಳವಣಿಗೆ ವಿಷಯವಾಗಿ ಇನ್ನು 3-4 ದಿನಗಳಲ್ಲಿ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆಯಲ್ಲಿ ಚರ್ಚೆ ನಡೆಸಲಾಗುತ್ತದೆ.

        ಉಭಯ ಸೇನೆಗಳು ಲೈನ್ ಆಫ್ ಪರ್ಸೆಪ್ಷನ್ ವರೆಗೂ ಗಸ್ತು ಚಟುವಟಿಕೆಗಳನ್ನು ಹೊಂದಿರುತ್ತವೆ. ಮುಖಾಮುಖಿಯಾದಾಗ ಸ್ಥಾಪಿತ ಶಿಷ್ಟಾಚಾರಗಳ ಪ್ರಕಾರವೇ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲಾಗುತ್ತದೆ.

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries