ವಾಷಿಂಗ್ಟನ್: ಭಾರತೀಯ- ಅಮೆರಿಕನ್ ವೈಮಾನಿಕ ಮತ್ತು ರಕ್ಷಣಾ ಪರಿಣಿತ ರವಿ ಚೌಧರಿ ಅವರನ್ನು ಪೆಂಟಗಾನ್ ನಲ್ಲಿ ಪ್ರಮುಖ ಹುದ್ದೆಯೊಂದಕ್ಕೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ನಾಮನಿರ್ದೇಶನ ಮಾಡಿರುವುದಾಗಿ ಶ್ವೇತ ಭವನ ತಿಳಿಸಿದೆ.
ಅಮೆರಿಕ ವಾಯುಪಡೆಯ ಮಾಜಿ ಅಧಿಕಾರಿ ಹಾಗೂ ಪೈಲಟ್ ಆಗಿರುವ ಚೌಧರಿ ಅವರನ್ನು ವಾಯುಪಡೆಯಲ್ಲಿನ ಇಂಧನ ಪರಿಸರ ಮತ್ತು ಪರಿಸರ ವಿಭಾಗದ ಸಹಾಯಕ ಕಾರ್ಯದರ್ಶಿ ಹುದ್ದೆಗೆ ಗುರುವಾರ ನಾಮನಿರ್ದೇಶನ ಮಾಡಲಾಗಿದೆ.
ರವಿ ಚೌಧರಿ ಪೆಂಟಗಾನ್ ನಲ್ಲಿ ಪ್ರಮುಖ ಹುದ್ದೆಯ ಅಧಿಕಾರ ಪಡೆಯುವ ಮುನ್ನ ಅಮೆರಿಕದ ಸೆನೆಟ್ ನಿಂದ ದೃಢೀಕರಣ ಪಡೆಯಬೇಕಾಗಿದೆ.