ನವದೆಹಲಿ: ಸಾಲದ ಸುಳಿಯಲ್ಲಿ ಸಿಲುಕಿರುವ 'ಏರ್ ಇಂಡಿಯಾ' ವಿಮಾನಯಾನ ಸಂಸ್ಥೆಯ ಹರಾಜು ಪ್ರಕ್ರಿಯೆಯಲ್ಲಿ 'ಟಾಟಾ ಸನ್ಸ್' ಸಲ್ಲಿಸಿರುವ ಬಿಡ್‌ಗೆ ಅನುಮೋದನೆ ಸಿಕ್ಕಿದೆ ಎಂಬ ವರದಿಗಳು ಪ್ರಕಟಗೊಂಡ ಬೆನ್ನಲ್ಲೇ ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅದನ್ನು ಕೋರ್ಟ್‌ನಲ್ಲಿ ಪ್ರಶ್ನಿಸುವ ಸುಳಿವು ನೀಡಿದ್ದಾರೆ.
'ಹೌದು, ಹರಾಜು ಪ್ರಕ್ರಿಯೆಗೆ ಸಹಿ ಹಾಕಿದ ಬಳಿಕ ಮತ್ತು ಮೊಹರು ಒತ್ತಿದ ನಂತರ ನಾನು ಕೋರ್ಟ್‌ಗೆ ಹೋಗಬಹುದು. ಈಗ ಅದು ಸಾಧ್ಯವಿಲ್ಲ' ಎಂದು ಸುಬ್ರಮಣಿಯನ್ ಸ್ವಾಮಿ ಪ್ರತಿಕ್ರಿಯಿಸಿದ್ದಾರೆ.
ಎಸ್‌ಐಸಿ ಕ್ಯಾಪಿಟಲ್ ಹೆಸರಿನ ಟ್ವಿಟರ್ ಖಾತೆಯೊಂದರಲ್ಲಿ ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯ ಹರಾಜು ಪ್ರಕ್ರಿಯೆಯಲ್ಲಿ ಟಾಟಾ ಸನ್ಸ್ ಗೆದ್ದಿರುವ ಬಗ್ಗೆ ಸುಬ್ರಮಣಿಯನ್ ಸ್ವಾಮಿ ಅವರ ಗಮನ ಸೆಳೆದಿದ್ದರು. ಮೂರು ದಿನಗಳ ಹಿಂದೆ 'ಧರ್ಮ' ಎಂಬ ಟ್ವಿಟರ್ ಖಾತೆಯಲ್ಲಿ ಹರಾಜು ಪ್ರಕ್ರಿಯೆಯ ಬೆಳವಣಿಗೆಗಳನ್ನು ಬಹಳ ಸೂಕ್ಷ್ಮವಾಗಿ ಸುಬ್ರಮಣಿಯನ್ ಸ್ವಾಮಿ ಅವರು ಗಮನಿಸುತ್ತಿದ್ದಾರೆ ಎಂದಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಸುಬ್ರಮಣಿಯನ್ ಸ್ವಾಮಿ ಹರಾಜು ಪ್ರಕ್ರಿಯೆಯನ್ನು ಪ್ರಶ್ನೆಸಿ ಕೋರ್ಟ್‌ನಲ್ಲಿ ದಾವೆ ಹೂಡುವ ಸಾಧ್ಯತೆ ಇದೆ.