ಕಾರಕಾಸ್: ಜಗತ್ತಿನಲ್ಲೇ ಅತ್ಯಂತ ಕೆಟ್ಟ ಆರ್ಥಿಕ ದುಸ್ಥಿತಿಯನ್ನು ಎದುರಿಸುತ್ತಿರುವ ದೇಶ ಎನ್ನುವ ಕುಖ್ಯಾತಿಗೆ ಪಾತ್ರವಾದ ವೆನಿಜುವೆಲ, 6 ಸೊನ್ನೆಗಳನ್ನು ತೆಗೆದುಹಾಕಿದ ಹೊಸ ಕರೆನ್ಸಿ ನೋಟನ್ನು ಬಿಡುಗಡೆಗೊಳಿಸಿದೆ.
ಇದುವರೆಗೂ ವೆನಿಜುವೆಲ ದೇಶದಲ್ಲಿ ಲಭ್ಯವಿದ್ದ ಅತ್ಯಧಿಕ ಮೊತ್ತದ ಕರೆನ್ಸಿ ಎಂದರೆ 10 ಲಕ್ಷ ಬೊಲಿವರ್. ಇದೀಗ ನೂತನ ಕರೆನ್ಸಿ ಅದಕ್ಕೆ ಬದಲಿಯಾಗಿ ರೂಪಿಸಲಾಗಿರುವ ಕರೆನ್ಸಿ 10 ಬೊಲಿವರ್ ಎಂದು ಹೇಳಲಾಗುತ್ತಿದೆ. ಆದರೆ ನೂತನ ಕರೆನ್ಸಿಯ ಮೌಲ್ಯ 10 ಲಕ್ಷ ಬೊಲಿವರ್ ಗಳಿಗಿಂತ ಹೆಚ್ಚು.
10 ಲಕ್ಷ ಬೊಲಿವರ್ 1 ಡಾಲರ್ ಗೂ ಕಡಿಮೆ ಮೌಲ್ಯ ಹೊಂದಿತ್ತು. ಇದೀಗ ಬಿಡುಗಡೆಯಾಗಿರುವ ನೂತನ 10 ಬೊಲಿವರ್ ಕರೆನ್ಸಿ 25 ಡಾಲರ್ ಗಿಂತ ಕಡಿಮೆ ಮೌಲ್ಯವನ್ನು ಹೊಂದಿದೆ.