ದೆಹಲಿ: ದೇಶದಲ್ಲಿ ಸಿರಿಂಜ್‌ಗಳ ಅಭಾವ ತಪ್ಪಿಸುವ ಮತ್ತು ಅವುಗಳ ಲಭ್ಯತೆ ಹೆಚ್ಚಿಸುವ ದೃಷ್ಟಿಯಿಂದ ಕೇಂದ್ರ ಆರೋಗ್ಯ ಸಚಿವಾಲಯವು ಕೆಲವು ವರ್ಗದ ಸಿರಿಂಜ್‌ಗಳ ರಫ್ತಿಗೆ ಶನಿವಾರ ಪರಿಮಾಣಾತ್ಮಕ ನಿರ್ಬಂಧ ಹೇರಿದೆ.
ನಿರ್ಬಂಧವು ಕೇವಲ ಮೂರು ವರ್ಗದ ಸಿರಿಂಜ್‌ಗಳಿಗೆ ಮಾತ್ರ ಅನ್ವಯಿಸುತ್ತದೆ. ಎಲ್ಲಾ ಅರ್ಹ ನಾಗರಿಕರಿಗೆ ಕೋವಿಡ್-19 ವಿರುದ್ಧ ಕಡಿಮೆ ಸಮಯದಲ್ಲಿ ಲಸಿಕೆ ನೀಡುವ ಅಭಿಯಾನದ ವೇಗವನ್ನು ಹೀಗೇ ಮುಂದುವರಿಸಿಕೊಂಡು ಹೋಗಲು ಸಿರಿಂಜ್‌ಗಳು ಅತ್ಯಗತ್ಯ ಎಂದು ಆರೋಗ್ಯ ಇಲಾಖೆ ಹೇಳಿದೆ.
ಇದು ರಫ್ತು ನಿಷೇಧವಲ್ಲ. ಆದರೆ ನಿರ್ದಿಷ್ಟ ಸಿರಿಂಜ್‌ಗಳ ರಫ್ತಿಗೆ ಕೇವಲ ಮೂರು ತಿಂಗಳ ಸೀಮಿತ ಅವಧಿಯವರೆಗೆ ಮಾತ್ರ ಪರಿಮಾಣಾತ್ಮಕ ನಿರ್ಬಂಧ ವಿಧಿಸಲಾಗಿದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
0.5 ಮಿಲಿ/1 ಎಂಎಲ್ ಎಡಿ (ಆಟೋ-ಡಿಸೇಬಲ್) ಸಿರಿಂಜ್ ಗಳು, 0.5 ಎಂಎಲ್/1 ಎಂಎಲ್/2 ಎಂಎಲ್/3 ಎಂಎಲ್ ವಿಲೇವಾರಿ ಮಾಡಬಹುದಾದ ಸಿರಿಂಜ್ ಗಳು ಮತ್ತು 1 ಎಂಎಲ್/2 ಎಂಎಲ್/3 ಎಂಎಲ್ ಆರ್ ಯು ಪಿ (ಮರು ಬಳಕೆ ರಹಿತ) ಸಿರಿಂಜ್‌ಗಳ ಮೇಲೆ ತಾತ್ಕಾಲಿಕ ನಿರ್ಬಂಧ ವಿಧಿಸಲಾಗಿದೆ.