ಕಾಸರಗೋಡು: ವಿವಿಧ ಸರಕಾರಿ ಯೋಜನೆಗಳಿಗಾಗಿ ಮರಗಳನ್ನು ಕಡಿದು ತೆರವುಗೊಳಿಸಬೇಕಾದ, ಅರಣ್ಯ ಜಾಗ ವಹಿಸಕೊಳ್ಳಬೇಕಾದ ಕಡೆಗಳಿಗೆ ಬದಲಾಗಿ ಕಂದಾಯ ಭೂಮಿಯಲ್ಲಿ ಒಳಗೊಳ್ಳುವ ಅರಣ್ಯ ಜಾಗವನ್ನು ನೀಡುವುದಕ್ಕೆ ಆದ್ಯತೆ ನೀಡಬೇಕಿದೆ ಎಂದು ಜಿಲ್ಲಾ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಜನಪ್ರತಿನಿಧಿಗಳು ಆಗ್ರಹಿಸಿದ್ದಾರೆ.
ಕಂದಾಯ ಭೂಮಿಯ ಅರಣ್ಯ ಪ್ರದೇಶ ಅರಣ್ಯ ಇಲಾಖೆಗೆ ಹಸ್ತಾಂತರಿಸಿದರೆ ಸಂರಕ್ಷೆಗೊಂಡೀತು. ಬೇಡಗಂನ ಪಶುಸಂಗೋಪನೆ ಇಲಾಖೆಯ ಮೇಕೆ ಫಾರಂ ನಿರ್ಮಾಣಕ್ಕೆ ಯೋಜನೆ ಪ್ರದೇಶದಲ್ಲಿ ಮರಗಳನ್ನು ಕಡಿದು ತೆರವುಗೊಳಿಸಬೇಕಿದೆ. ತಕ್ಷಣ ಜಾಗ ಪರಿಶೀಲನೆ ನಡೆಸಿ ವಿಲಂಬವಿಲ್ಲದೆ ತೆರವುಗೊಳಿಸಬೇಕಾದ ಮರಗಳ ಕುರಿತು ವರದಿ ಸಿದ್ಧಪಡಿಸಿ ಕ್ರಮ ಕೈಗೊಳ್ಳಬೇಕು. ಇಲ್ಲಿನ ಅಕೇಷ್ಯಾ ಮರಗಳನ್ನು ಕಡಿದು ತೆರವುಗೊಳಿಸುವ ಚಟುವಟಿಕೆ ನಡೆಸುವುದಾಗಿಯೂ, ಜಿಲ್ಲಾ ವೃಕ್ಷ ಸಮಿತಿ ಸಭೆ ಸೇರಿ ವಿವಿಧ ಯೋಜನೆಗಳಿಗೆ ಮರಗಳನ್ನು ಕಡಿದು ತೆರವುಗೊಳಿಸುವ ಕುರಿತು ತೀರ್ಮಾನ ಕೈಗೊಳ್ಳಬೇಕು ಎಂದು ಸಭೆ ಆದೇಶಿಸಿದೆ.
ಪಾಸೆಂಜರ್ ಟರೈಲುಗಳನನು ಅಧಿಕ ಪ್ರಮಾಣದಲ್ಲಿ ಆಶ್ರಯಿಸುವ ಮಂದಿಯಿರುವ ಚಂದೇರ ರೈಲು ನಿಲ್ದಾಣದಲ್ಲಿ ರೈಲು ನಿಲುಗಡೆ ಮರಳಿ ಸ್ಥಾಪಿಸುವಂತೆ ಸಭೆ ಆಗ್ರಹಿಸಿದೆ. ಈ ಸಂಬಂಧ ದಕ್ಷಿಣ ರೈಲ್ವೇ ಜನರಲ್ ಅವರಿಗೆ ಮನವಿ ಸಲ್ಲಿಸಲಾಗುವುದು.
ಕಾಸರಗೋಡು ನಗರದ ಪಿಲಿಕುಂಜೆಯ ವಲಯ ಕಂದಾಯಾಧಿಕಾರಿ ಕಚೇರಿ ಸಂಕೀರ್ಣದ ತಾಂತ್ರಿಕ ಅಡಚಣೆಗಳನ್ನು ಪರಿಹರಿಸಿ ನಿರ್ಮಾಣ ಚಟುವಟಿಕೆ ಆರಂಭಿಸುವಂತೆ ಸಭೆ ಆದೇಶಿಸಿದೆ. ಅ.7ರ ಮುಂಚಿತವಾಗಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಆದೇಶಿಸಿದರು. ವಿವಿಧ ಯೋಜನೆಗಳಿಗೆ ಸಂಬಂಧಿಸಿ ಸ್ಥಳೀಯ ಅಭಿವೃದ್ಧಿ ನಿಧಿ ಯೋಜನೆಯಲ್ಲಿ ಅಳವಡಿಸಿ ಯೋಜನೆಗಳನ್ನು ಶೀಘ್ರದಲ್ಲಿ ಪೂರ್ಣಗೊಳಿಸುವಂತೆ ಶಾಸಕರು ಆಗ್ರಹಿಸಿದರು.
ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ ವೀರ್ ಚಂದ್ ಅಧ್ಯಕ್ಷತೆ ವಹಿಸಿದ್ದರು.
ಮುಳಿಯಾರಿನ ಎಂಡೋಸಲ್ಫಾನ್ ಪುನರ್ವಸತಿ ಗ್ರಾಮದ ಕರಾರು ಕ್ರಮಗಳನ್ನು ಪೂರ್ಣಗೊಳಿಸಿ ಚಟುವಟಿಕೆ ಆರಂಭಿಸುವಂತೆ ಶಾಸಕ ಎನ್.ಎ.ನೆಲ್ಲಿಕುನ್ನು ಆಗ್ರಹಿಸಿದರು. ಈ ಹಿಂದೆ ಮಂಜೂರು ಮಾಡಿರುವ ನಿಧಿಯಲ್ಲಿ ಅಳವಡಗೊಳಿಸಿರುವ ನೂತನ ಎಸ್ಟಿಮೇಟ್ ಪ್ರಕಾರ ನಿರ್ಮಾಣ ಹೊಣೆ ವಹಿಸಿಕೊಂಡಿರುವ ಯು.ಎಲ್.ಸಿ.ಸಿ.ಎಸ್ ನೊಂದಿಗೆ ಕರಾರು ಸಹಿ ಮಾಡಬಹುದು ಎಂದು ನಿರ್ವಹಣೆ ಸಿಬ್ಬಂದಿ ತಿಳಿಸಿದರು.
ತಾಂತ್ರಿಕ ಶಿಕ್ಷಣ ಸಂಸ್ಥೆಗಳಿಲಲ್ದ ಮಂಜೇಶ್ವರ ತಾಲೂಕಿನಲ್ಲಿ ಸರಕಾರಿ ಪಾಲಿಟೆಕ್ನಿಕ್ ಮಂಜೂರು ಮಾಡಬೇಕು ಎಂದು ಶಾಸಕ ಎ.ಕೆ.ಎಂ.ಅಶ್ರಫ್ ಆಗ್ರಹಿಸಿದರು. ಕುಂಬಳೆ ಐ.ಎಚ್.ಆರ್.ಡಿ. ಕಾಲೇಜಿನಲ್ಲಿ ನೂತನ ಕಟ್ಟಡದ ಚಟುವಟಿಕೆಗಳನ್ನು ಶೀಘ್ರದಲ್ಲಿ ಪೂರ್ತಿಗೊಳಿಸಬೇಕು ಎಂದು ಅವರು ಬೇಡಿಕೆ ಇರಿಸಿದರು.
ವಿವಿಧ ವಿಚಾರಗಳನ್ನು ಚರ್ಚಿಸಲಾಯಿತು. ಜಿಲ್ಲಾ ಯೋಜನೆ ಅಧಿಕಾರಿ ಎ.ಎಸ್.ಮಾಯಾ ವರದಿ ವಾಚಿಸಿದರು. ಹೆಚ್ಚುವರಿ ದಂಡನಾಧಿಕಾರಿ ಎ.ಕೆ.ರಮೇಂದ್ರನ್, ಜನಪ್ರತಿನಿಧಿಗಳು, ನಿರ್ವಹಣ ಸಿಬ್ಬಂದಿ ಉಪಸ್ಥಿತರಿದ್ದರು.