ಮಧೂರು : ವೇದ, ಉಪನಿಷತ್ತುಗಳಲ್ಲಿ ಪ್ರಾಚೀನ ಶಿಕ್ಷಣ ಮತ್ತು ಸಂಸ್ಕøತಿಯ ದರ್ಶನವಿದೆ ಎಂದು ಪುರೋಹಿತ ರತ್ನ ಬ್ರಹ್ಮಶ್ರೀ ಬಿ.ಕೇಶವ ಆಚಾರ್ಯ ಅವರು ನುಡಿದರು.
ವಿಂಶತಿ ವರ್ಷಾಚರಣೆಯಂಗವಾಗಿ ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಕನ್ನಡ ಭವನ ಮತ್ತು ಗ್ರಂಥಾಲಯದ ಗುರುನಮನ ಸ್ವೀಕರಿಸಿ ಅವರು ಮಾತನಾಡಿದರು.
ಗುರು ಅಂದರೆ ಮಾರ್ಗದರ್ಶಕ, ದಾರಿ ತೋರಿಸುವವನು ಎಂದರ್ಥ, ಗುರುವೇ ದಾತಿ, ಜ್ಞಾನನಿಧಿ ಮಾತ್ರವಲ್ಲದೆ ವೈಚಾರಿಕ ಕ್ರಾಂತಿಯನ್ನು ಶಿಷ್ಯ ವರ್ಗದಲ್ಲಿ ಮಾಡಿಸುವವನು. ಅರಿವಿನ ಬೆಳಕನ್ನು ನೀಡುವವನು. ಆದ್ದರಿಂದಲೇ ಗುರುವಿಗೆ ಸಮಾಜದಲ್ಲಿ ಉನ್ನತ ಸ್ಥಾನಮಾನವಿದೆ ಎಂದು ಬಿ.ಕೇಶವ ಆಚಾರ್ಯ ಅವರು ಹೇಳಿದರು.
ಉಳಿಯತ್ತಡ್ಕದ ಗುರುಕೃಪಾ ಲಕ್ಷ್ಮೀ ನಿವಾಸದಲ್ಲಿ ಜರಗಿದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಭವನ ಗ್ರಂಥಾಲಯದ ಗೌರವಾಧ್ಯಕ್ಷ ಪ್ರದೀಪ್‍ಬೇಕಲ್ ವಹಿಸಿದ್ದರು. ಸಂಸ್ಥೆಯ ಸ್ಥಾಪಕ ಕೆ.ವಾಮನ ರಾವ್ ಬೇಕಲ್ ಮತ್ತು ಕೋಶಾಧಿಕಾರಿ ಕೆ.ಸಂಧ್ಯಾರಾಣಿ ಟೀಚರ್ ಗುರುನಮನ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಬಾಲಪ್ರತಿಭೆ ತೇಜಸ್ ಅವರಿಗೆ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು. ಸಾಹಿತಿ ವಿ.ಬಿ.ಕುಳಮರ್ವ, ಕನ್ನಡ ಭವನ ಗ್ರಂಥಾಲಯದ ಅಧ್ಯಕ್ಷ ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಶಿಕ್ಷಕ ವಿಶಾಲಾಕ್ಷ ಪುತ್ರಕಳ ನುಡಿ ಕಾಣಿಕೆ ಸಲ್ಲಿಸಿದರು. ಬಿ.ಕೇಶವ ಆಚಾರ್ಯರು ಕನ್ನಡ ಭವನ ಗ್ರಂಥಾಲಯಕ್ಕೆ ಆಕರ ಗ್ರಂಥವೊಂದನ್ನು ನೀಡಿದರು. ಗೌರಿ ಆಚಾರ್ಯ, ಗೋಪಾಲಕೃಷ್ಣ ಆಚಾರ್ಯ, ಗುರುಪ್ರಸಾದ್ ಆಚಾರ್ಯ, ಹರಿಪ್ರಸಾದ್ ಶರ್ಮ, ಜಗನ್ನಾಥ, ವಸಂತ ಕೆರೆಮನೆ ಮೊದಲಾದವರು ಉಪಸ್ಥಿತರಿದ್ದರು. ಜಗದೀಶ ಕೂಡ್ಲು ಕೆ. ಅವರು ಕಾರ್ಯಕ್ರಮ ನಿರೂಪಿಸಿದರು.