ವಯನಾಡು: ವಯನಾಡಿನಲ್ಲಿ ನೀಲಗಿರಿ ಹುಲಿ ಪ್ರಬೇಧ ಪತ್ತೆಯಾಗಿದೆ. ಶ|ವಾನಗಳನ್ನು ಇವುಗಳು ಬೇಟೆಯಾಡುತ್ತಿರುವ ಬಗ್ಗೆ ಸೂಚನೆಗಳಿವೆ. ನೀಲಗಿರಿ ಹುಲಿ ಕೇರಳದಲ್ಲಿ ಮಾತ್ರ ಕಂಡುಬರುವ ಅಪೂರ್ವ ಜಾತಿಯಾಗಿದೆ, ಮುಖ್ಯವಾಗಿ ದಕ್ಷಿಣ ಭಾರತದಲ್ಲಿ.
ಆದರೆ ವಿಜ್ಞಾನಿ ಮತ್ತು ಪರಿಸರ ಕಾರ್ಯಕರ್ತ ಡಿಜೋ ಥಾಮಸ್ ಹೇಳುವಂತೆ ನೀಲಗಿರಿ ಹುಲಿಯು ಸಾಕು ಪ್ರಾಣಿಗಳನ್ನು ಕೊಲ್ಲುತ್ತದೆ ಮತ್ತು ಆನೋತ್, ಅತ್ತಿಮುಲಾ ಮತ್ತು ಶ್ರೀಪುರಂ ಪ್ರದೇಶಗಳಲ್ಲಿ ಭಯವನ್ನು ಹರಡುತ್ತಿದೆ. ಈ. ಜೀವಿಯನ್ನು ನೇರವಾಗಿ ಈವರೆಗೆ ಕಂಡಿಲ್ಗ. ಡಿಜೊ ಥಾಮಸ್ ಇದನ್ನು ಎನ್ ಎಸ್ಪಿಎಂ ವೈಜ್ಞಾನಿಕ ವಿಧಾನ ಮತ್ತು ಪ್ರತ್ಯಕ್ಷದರ್ಶಿಗಳ ಮಾಹಿತಿಯನ್ನು ಬಳಸಿ ಸಾಬೀತುಪಡಿಸಿದರು.
ಆಕ್ರಮಣಶೀಲ ನಡವಳಿಕೆ, ಬೇಟೆಯ ಹುಡುಕಾಟ ಮತ್ತು ಹೆಜ್ಜೆಗುರುತುಗಳು ಸೇರಿದಂತೆ ಅರವತ್ತು ಮಾನದಂಡಗಳನ್ನು ಗುರುತಿಸಲು ಅಳವಡಿಸಿಕೊಳ್ಳಲಾಗಿದೆ.
ನೀಲಗಿರಿ ಹುಲಿಯನ್ನು ಡಾಗ್ ಟೈಗರ್ ಮತ್ತು ಜಾನುವಾರು ಹುಲಿ ಎಂದೂ ಕರೆಯುತ್ತಾರೆ. ಇದನ್ನು ಮೊದಲು 2014 ರಲ್ಲಿ ನೆಯ್ಯಾರ್ ಪ್ರದೇಶದಲ್ಲಿ ಕಂಡುಹಿಡಿಯಲಾಯಿತು. ನಾಯಿಗಳು ಮತ್ತು ಕಾಡುಹಂದಿಗಳು ಹೇರಳವಾಗಿರುವ ದಟ್ಟ ಕಾಡುಗಳಲ್ಲಿ ಅವು ಹೆಚ್ಚಾಗಿ ಕಂಡುಬರುತ್ತವೆ.
ಹುಲಿಯ ಗಾತ್ರÀ, ಕೆಂಪು-ಕಂದು ಬಣ್ಣದ ಈ ಪ್ರಾಣಿಯ ಮುಖವು ನಾಯಿಯ ಮುಖವನ್ನು ಹೋಲುತ್ತದೆ. ನಾಯಿಗಳು ನೀಲಗಿರಿ ಹುಲಿಯ ಮುಖ್ಯ ಆಹಾರವಾಗಿದ್ದು, ಇದು ಸಾಂದರ್ಭಿಕವಾಗಿ ಮಾನವ ನೆಲೆಗಳಿಗೆ ಪ್ರವೇಶಿಸುತ್ತದೆ.
ಇತರ ಜಾತಿಗಳಿಂದ ಇದನ್ನು ಪ್ರತ್ಯೇಕಿಸುವುದು ನೀಲಗಿರಿ ಹುಲಿಯ ಹೆಜ್ಜೆಗುರುತಿನ ಗಾತ್ರ. ಹೆಜ್ಜೆಗುರುತು 11 ಸೆಂ.ಮೀ ಉದ್ದವಿದೆ. ಅವುಗಳು ಯಾರ ಗಮನಕ್ಕೂ ಬಾರದೆ ಬೇಟೆಯಾಡುವ ಸಾಮಥ್ರ್ಯ ವಿಶೇಷವಾಗಿದೆ. ಆದ್ದರಿಂದ, ಇವುಗಳ ಫೆÇೀಟೋಗಳು ಸುಲಭವಾಗಿ ಲಭ್ಯವಿಲ್ಲ.