ಹಬ್ಬಗಳ ಸಮಯದಲ್ಲಿ ಡಯಟ್ ಹೆಸರಿನಲ್ಲಿ ಹಬ್ಬದ ಅಡುಗೆಯನ್ನು ಸವಿಯದಿರುವುದು ಎಲ್ಲಾದರೂ ಉಂಟೇ? ಹಬ್ಬದ ಅಡುಗೆ ಸವಿದರನೇ ಹಬ್ಬ ಆಚರಿಸಿದ ತೃಪ್ತಿ ಸಿಗುವುದು. ಹಬ್ಬದ ಅಡುಗೆ ಎಂದ ಮೇಲೆ ಸಿಹಿ ತಿಂಡಿಗಳು, ಎಣ್ಣೆಯಲ್ಲಿ ಕಡಿಮೆ ಪದಾರ್ಥಗಳು ಇದ್ದೇ ಇರುತ್ತದೆ. ಆದರೆ ಎಣ್ಣೆಯಲ್ಲಿ ಕರಿದ ತಿಂಡಿಗಳನ್ನು ತಿಂದ ಬಳಿಕ ಕೆಲವರಿಗೆ ಅಸಿಡಿಟಿ, ಹೊಟ್ಟೆ ಉಬ್ಬುವುದು, ಮಲಬದ್ಧತೆ ಮುಂತಾದ ಸಮಸ್ಯೆ ಉಂಟಾಗುವುದು.
ಅಜೀರ್ಣಕ್ಕೆ ಸಂಬಂಧಿಸಿದ ಇಂಥ ಸ,ಸ್ಯೆಗಳಿಗೆ ಸೆಲೆಬ್ರಿಟಿ ಡಯಟಿಷಿಯನ್ ರುಜುತಾ ದ್ವಿವೇಕರ್ ಅತ್ಯುತ್ತಮವಾದ ಟಿಪ್ಸ್ ನೀಡಿದ್ದಾರೆ. ಈ ಟಿಪ್ಸ್ ಪಾಲಿಸಿದರೆ ನಿಮಗೆ ಹಬ್ಬದ ಅಡುಗೆ ಸವಿದ ಬಳಿಕ ಅಜೀರ್ಣ, ಅಸಿಡಿಟಿ, ಮಲಬದ್ಧತೆ ಇಂಥ ಸಮಸ್ಯೆ ಕಾಡುವುದಿಲ್ಲ. ಅವರು ನೀಡಿರುವ ಟಿಪ್ಸ್ ತುಂಬಾ ಸರಳವಾಗಿದ್ದು ಏನು ಮಾಡಬೇಕೆಂದು ನೋಡೋಣ ಬನ್ನಿ:
1. ನಿಮ್ಮ ದಿನವನ್ನು ಗುಲ್ಕಂದ ಜೊತೆ ಪ್ರಾರಂಭಿಸಿ
ಗುಲ್ಕಂದ ತಿನ್ನುವುದರಿಂದ ಅಜೀರ್ಣ ಸಮಸ್ಯೆ ಹೋಗಲಾಡಿಸಬಹುದು. ಇದು ಹೊಟ್ಟೆಗೆ ಆರಾಮ ನೀಡುವುದು, ಮಲಬದ್ಧತೆ ಸಮಸ್ಯೆ ಕಾಡುವುದಿಲ್ಲ. ಇದರಿಂದಾಗಿ ಹೊಟ್ಟೆ ಉಬ್ಬುವುದು, ಅಸಿಡಿಟಿ ಇಂಥ ಸಮಸ್ಯೆ ಇರಲ್ಲ.
2. ಬ್ರೇಕ್‌ಫಾಸ್ಟ್ ಬಳಿಕ 15 ನಿಮಿಷ ನಿದ್ರಿಸಿ ಅಸಿಡಿಟಿ, ಮಲಬದ್ಧತೆ, ಹೊಟ್ಟೆ ಉಬ್ಬುವುದು ಇಂಥ ಸಮಸ್ಯೆ ಇದ್ದವರು ಬೆಳಗ್ಗೆ ಬ್ರೇಕ್‌ಫಾಸ್ಟ್ ಆದ ಮೇಲೆ 15-20 ನಿಮಿಷ ನಿದ್ರಿಸಬೇಕೆಂದು ನ್ಯೂಟ್ರಿಷಿಯನಿಸ್ಟ್ ಹೇಳಿದ್ದಾರೆ. ಇದರಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಕಡಿಮೆಯಾಗುವುದು.
3. ಮಧ್ಯಾಹ್ನ ಊಟವಾದ ಬಳಿಕ 1/2 ಬಾಳೆಹಣ್ಣು ತಿನ್ನಿ ಊಟವಾದ ಬಳಿಕ ಮಧ್ಯಾಹ್ನ ಒಂದು ಅಥವಾ ಅರ್ಧ ಬಾಳೆಹಣ್ಣು ತಿಂದ್ರೆ ಜೀರ್ಣಕ್ರಿಯೆಗೆ ಸಹಕಾರಿ.
4. ಸಂಜೆ 5 ನಿಮಿಷ ಸುಪ್ತ ಬದ್ಧ ಕೋನಾಸನದಲ್ಲಿ ಮಲಗಿ ಸುಪ್ತಬದ್ಧ ಕೋನಾಸನ ಎಂಬುವುದು ತುಂಬಾ ಸರಳವಾದ ಆಸನವಾಗಿದ್ದು ಯಾರಿಗೆ ಬೇಕಾದರೂ ಮಾಡಬಹುದು. ಸಂಜೆ ಬೆಡ್ ಮೇಲೆ 5 ನಿಮಿಷ ಸುಪ್ತ ಬದ್ಧ ಕೋನಾಸನದಲ್ಲಿ ಕೂರಿ ಅಥವಾ ಮಲಗಿ. ಇದರಿಂದ ಮಲಬದ್ಧತೆ ಕಡಿಮೆಯಾಗುವುದು.
5. ರಾತ್ರಿ ಗಂಜಿ ನೀರಿಗೆ ಸ್ವಲ್ಪ ತಪ್ಪ ಹಾಕಿ ಕುಡಿಯಿರಿ ರಾತ್ರಿ ಊಟವಾದ ಬಳಿಕ ಗಂಜಿ ನೀರಿಗೆ ಸ್ವಲ್ಪ ತುಪ್ಪ ಹಾಕಿ ಕುಡಿಯಿರಿ. ಈ ರೀತಿ ಮಾಡುವುದರಿಂದ ಅಸಿಡಿಟಿ, ಹೊಟ್ಟೆ ಉಬ್ಬುವುದು, ಮಲಬದ್ಧತೆ ಇಷ್ಟೂ ಸಮಸ್ಯೆ ತಡೆಗಟ್ಟಬಹುದು. ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸಿಕ್ಕಾಯ್ತಲ್ಲಾ? ಮತ್ಯಾಕೆ ತಡ ಹಬ್ಬದ ಅಡುಗೆ ಏನೆಲ್ಲಾ ಬೇಕೋ ಅವುಗಳೆನ್ನೆಲ್ಲಾ ಲಿಸ್ಟ್ ಮಾಡಿ ತಯಾರಿಸಿ ಸವಿಯಿರಿ.