ಮಂಜೇಶ್ವರ: ಮಂಜೇಶ್ವರ ಶಾಸಕರು ಕೇರಳ ವಿಧಾನ ಸಭೆಯಲ್ಲಿ ಪದೇ ಪದೇ ಆರ್ ಎಸ್ ಎಸ್ ನ್ನು ದೂಶಿಸುವ ಹಿಂದೆ ದೊಡ್ಡ ಷಡ್ಯಂತ್ರ ಇದೆ ಎಂದು ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಮಣಿಕಂಠ ರೈ ಆರೋಪಿಸಿದ್ದಾರೆ.
ಮಂಜೇಶ್ವರ ವಿಧಾನ ಸಭೆಯಲ್ಲಿ ಯಾವುದೇ ಸಣ್ಣ ಪುಟ್ಟ ಜಗಳ ಗಳಿಗೆ ಕೋಮು ಭಾವನೆ ಹಚ್ಚಿ ಅದನ್ನು ಆರ್ ಎಸ್ ಎಸ್ ಮೇಲೆ ಕಟ್ಟಿ ವಿಧಾನಸಭೆ ಯಲ್ಲಿ ಮಾತನಾಡುವುದು ಮುಂದಿನ ಚುನಾವಣೆ ಗೆ ಪೂರ್ವ ತಯಾರಿ ಮಾಡುವಂತಿದೆ. ಕೇವಲ ಅಲ್ಪ ಮತಕ್ಕೆ ಗೆದ್ದು ಮುಸ್ಲಿಂ ಮತವನ್ನು ಗಟ್ಟಿಗೊಳಿಸುವ ತಂತ್ರಕ್ಕೆ ಮಂಡಲದ ಯಾವುದೇ ಹಿಂದೂ-ಮುಸ್ಲಿಂ ಪ್ರಜ್ಞಾವಂತರು ಬಲಿಯಾಗಬಾರದಾಗಿ ಮಣಿಕಂಠ ರೈ ಹೇಳಿರುವರು.
ಮಂಡಲದಲ್ಲಿ ಅಭಿವೃದ್ಧಿ ಚರ್ಚೆ ಬಿಟ್ಟು ಕೋಮು ಭಾವನೆ ಕೆರಳಿಸಲು ಆರ್ ಎಸ್ ಎಸ್ ನ್ನು ಬಳಸುವುದನ್ನು ಶಾಸಕರು ಕೈ ಬಿಡಬೇಕು. ಇಲ್ಲವಾದಲ್ಲಿ ಜನರೇ ತಕ್ಕ ಪಾಠ ಕಲಿಸುವರು. ಅಷ್ಟೊಂದು ಕಾಳಜಿ ಇದ್ದಲ್ಲಿ ಭಾರತ ಪಾಕಿಸ್ತಾನ ಕ್ರಿಕೆಟ್ ಪಂದ್ಯಾಟದಲ್ಲಿ ಪಾಕಿಸ್ತಾನ ಗೆದ್ದಾಗ ಅದಕ್ಕೆ ಸಂಭ್ರಮಿಸಿದವರ ವಿರುದ್ಧ ಕೇಸ್ ಹಾಕಲು ಮಾತನಾಡಲಿ ಮತ್ತು ಪುತ್ತಿಗೆ ಪಂಚಾಯತಿಯ ಬಾಡೂರ್ ಪ್ರವೀಣ್ ಕುರಿತು ಚಕಾರ ಎತ್ತದ ಶಾಸಕರ ಗೂಢಲೋಚಗೆ ಜನರೇ ಉತ್ತರಿಸಿಯಾರು ಎಂದು ಮಣಿಕಂಠ ರೈ ಪ್ರಕಟ|ಣೆಯಲ್ಲಿ ತಿಳಿಸಿದ್ದಾರೆ.
ಮಂಜೇಶ್ವರ ಕ್ಷೇತ್ರ ಅಭಿವೃದ್ದಿಯಲ್ಲಿ ಭಾರೀ ಹಿಂದುಳಿದಿದೆ. ಯುವ ಉದ್ಯೋಗಕಾಂಕ್ಷಿಗಳಿಗೆ ಉದ್ಯೋಗ ನಿರ್ಮಾಣ, ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ವ್ಯವಸ್ಥೆ, ಉತ್ತಮ ಚಿಕಿತ್ಸಾ ಸೌಕರ್ಯಗಳಿರುವ ಆಸ್ಪತ್ರೆ, ಸ್ವ ಉದ್ಯೋಗ ನಿರ್ವಹಣೆಗೆ ಬೇಕಾದ ವಿವಿಧ ಸಂಪನ್ಮೂಲಗಳು, ಕೃಷಿ ವ್ಯವಸ್ಥೆಯ ಬಲವರ್ಧನೆಗೆ ಕ್ರಮಗಳೇ ಮೊದಲಾದ ಅಭಿವೃದ್ದಿ ಚಟುವಟಿಕೆಗಳಿಗೆ ಶಾಸಕರು ಮುತುವರ್ಜಿ ವಹಿಸಿದರೆ ಶಾಸಕರಾಗಿರುವುದಕ್ಕೆ ಸಾರ್ಥಕತೆ ಆಗುವುದೆಂದು ಮಣಿಕಂಠ ರೈ ಪ್ರಕಟ|ಣೆಯಲ್ಲಿ ತಿಳಿಸಿದ್ದಾರೆ.