ಕಾಸರಗೋಡು: ಜಿಲ್ಲೆಯಲ್ಲಿ ಆಲ್ ಇಂಡಿಯಾ ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಯನ್ಸ್(ಏಮ್ಸ್)ಸ್ಥಾಪಿಸುವ ಬೇಡಿಕೆಯೊಂದಿಗೆ ಜನಪರ ಒಕ್ಕೂಟ ವತಿಯಿಂದ ಉಪವಾಸ ಸತ್ಯಾಗ್ರಹ ಗುರುವಾರ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಎದುರು ಆರಂಭಗೊಂಡಿತು.
ಧಾರ್ಮಿಕ, ರಾಜಕೀಯ, ಸಾಮಾಜಿಕ, ಸಾಂಸ್ಕøತಿಕ ರಂಗಗಳ ಮುಖಂಡರು ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳುವ ಮೂಲಕ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ನಡೆಯಿತು. ಕಾಸರಗೋಡು ಶಾಸಕ ಎನ್.ಎ ನೆಲ್ಲಿಕುನ್ನು ನೇತ್ರತ್ವದಲ್ಲಿ ಸ್ವಾಮೀಜಿ ಹಾಗೂ ಗಣ್ಯರು ಧರಣಿ ಉದ್ಘಾಟಿಸಿದರು. ಜನಪರ ಒಕ್ಕೂಟ ಅಧ್ಯಕ್ಷ ಕೆ.ಜಿ ಸಜಿ ಅಧ್ಯಕ್ಷತೆ ವಹಿಸಿದ್ದರು. ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಚಿನ್ಮಯ ಮಿಶನ್ ಮುಖ್ಯಸ್ಥ ಸ್ವಾಮಿ ವಿವಿಕ್ತಾನಂದ ಸರಸ್ವತೀ, ಫಾದರ್ ಥಾಮ್ಸನ್ ಕುಟ್ಟಿಯಾತ್, ಸಂಸದ ರಾಜ್ಮೋಹನ್ ಉಣ್ಣಿತ್ತಾನ್, ಪಿ.ಕೆ ಫೈಸಲ್, ಕೆ.ವಿ.ವಿ.ಇ.ಎಸ್ ನೇತಾರ ಕೆ. ಅಹಮ್ಮದ್ ಶೆರೀಫ್ ಮುಂತಾದವರು ಉಪಸ್ಥಿತರಿದ್ದರು.