ಆಲಪ್ಪುಳ: ಆರು ತಿಂಗಳ ಹಿಂದೆ ಕೊರೋನಾದಿಂದ ಮೃತಪಟ್ಟ ಕೆಎಸ್‍ಆರ್‍ಟಿಸಿ ಕಂಡಕ್ಟರ್ ನ್ನು ವರ್ಗಾವಣೆ ಮಾಡಲಾಗಿದೆ. ಚೆರ್ತಲ ಡಿಪೆÇೀದಲ್ಲಿ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದಾಗ ನಿಧನರಾದ ಪೂಚಕ್ಕಲ್ ಮೂಲದ ಫಜಲ್ ರೆಹಮಾನ್ ಅವರ ಹೆಸರಿನಲ್ಲಿ ವರ್ಗಾವಣೆ ಆದೇಶವನ್ನು ನೀಡಲಾಗಿದೆ. ಕೂಡಲೇ ಕರ್ತವ್ಯಕ್ಕೆ ಪ್ರವೇಶಿಸುವಂತೆ ಸೂಚಿಸಲಾಗಿದೆ.
ಈ ಆದೇಶ ಮನೆಗೆ ತಲುಪಿದಾಗ, ಸಂಬಂಧಿಕರು ಕೆಎಸ್‍ಆರ್‍ಟಿಸಿಯನ್ನು ಸಂಪರ್ಕಿಸಿದರು. ಇದರೊಂದಿಗೆ, ಸಮಜಾಯಿಷಿ ನೀಡಿದ ಇಲಾಖೆ ಕೆಎಸ್‍ಆರ್‍ಟಿಸಿಯ ತಾಂತ್ರಿಕ ದೋಷದಿಂದ ಈ ಘಟನೆ ಸಂಭವಿಸಿದೆ ಮತ್ತು ಸಾವಿನ ಸಕಾಲಿಕ ವರದಿಯಲ್ಲಿನ ದೋಷದಿಂದಾಗಿ ಕರಡು ವರ್ಗಾವಣೆ ಪಟ್ಟಿಯಲ್ಲಿ ಇಲ್ಲದ ಫಜಲ್ ಹೆಸರನ್ನು ಅಂತಿಮ ಪಟ್ಟಿಯಲ್ಲಿ ಸೇರಿಸಲಾಗಿದೆ ಎನ್ನಲಾಗಿದೆ.
ಈ ಹಿಂದೆ, ಫಜಲ್ ಅವರ ಮರಣೋತ್ತರ ಸಮಾರಂಭಗಳಲ್ಲಿ, ವಂದನಂ ವೈದ್ಯಕೀಯ ಕಾಲೇಜಿನಿಂದ ದೂರವಾಣಿ ಕರೆ ಬಂದಿತ್ತು, ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ ಮತ್ತು ಅವರ ಸಂಬಂಧಿಕರು ಕೂಡಲೇ ಆಗಮಿಸಬೇಂದು ಸೂಚಿಸಲಾಗಿತ್ತು. ಬಳಿಕ ವೈದ್ಯಕೀಯ ಕಾಲೇಜು ಅಧಿಕಾರಿಗಳು ಇದು ಆಸ್ಪತ್ರೆಯ ಲೋಪದಿಂದ ಎಂದು ಹೇಳಿಕೆ ನೀಡಿದ್ದರು.