ತಿರುವನಂತಪುರಂ: ಪಶುಸಂಗೋಪನಾ ಸಚಿವೆ ಚಿಂಚು ರಾಣಿ ಅವರ ವಾಹನ ಅಪಘಾತಕ್ಕೀಡಾಗಿದೆ. ತಿರುವಲ್ಲಾ ಬೈಪಾಸ್‌ನಲ್ಲಿ ಬೆಳಗ್ಗೆ ಈ ಘಟನೆ ನಡೆದಿದೆ. ಸಚಿವರಿಗೆ ಗಾಯವಾಗಿಲ್ಲ,ಸುರಕ್ಷಿತರಾಗಿದ್ದಾರೆಂದು ಮೂಲಗಳು ತಿಳಿಸಿವೆ.
ತಿರುವನಂತಪುರದಿಂದ ಇಡುಕ್ಕಿಗೆ ತೆರಳುತ್ತಿದ್ದಾಗ ಸಚಿವರ ವಾಹನ ಅಪಘಾತಕ್ಕೀಡಾಗಿದೆ. ಖಾಸಗಿ ಬಸ್ ವೇಗವಾಗಿ ಬಂದಿದ್ದರಿಂದ ಎದುರಿನಿಂದ ಬರುತ್ತಿದ್ದ ಸಚಿವರ ಕಾರು ಅಪಘಾತ ತಪ್ಪಿಸುವ ಭರದಲ್ಲಿ ಪಕ್ಕದ ಗೋಡೆಗೆ ಡಿಕ್ಕಿ ಹೊಡೆದಿದೆ.