ನವದೆಹಲಿ: ಕೆಲ ವರ್ಷಗಳಿಂದ ಬಹುತೇಕ ವಹಿವಾಟಿಗೆ ಫೋನ್-ಪೇ ಬಳಸುವವರ ಸಂಖ್ಯೆ ಹೆಚ್ಚಾಗಿದೆ. ದಿಢೀರ್ ಎಂದು ಅತಿ ಸುಲಭದಲ್ಲಿ ಈ ಆಯಪ್ ಮೂಲಕ ಹಣವನ್ನು ವರ್ಗಾಯಿಸುವ ಹಿನ್ನೆಲೆಯಲ್ಲಿ ಇದರ ಬಳಕೆ ಮಾಡುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದೆ.
ಆದರೆ ಇದೀಗ ಫೋನ್ ಪೇ ವಹಿವಾಟುದಾರರಿಗೆ ಎಕ್ಸ್‌ಟ್ರಾ ಚಾರ್ಜ್ ಮಾಡಲಿದೆ. ಸದ್ಯ ಮೊಬೈಲ್ ರೀಚಾರ್ಜ್ ಮಾಡಿದರೆ ಹೆಚ್ಚುವರಿಯಾಗಿ ಹಣವನ್ನು ಪಾವತಿ ಮಾಡಬೇಕಿದೆ.
50 ರೂಪಾಯಿ ಮೇಲ್ಪಟ್ಟು ಮೊಬೈಲ್ ಚಾರ್ಜ್ ಮಾಡಿದರೆ ಆ ವಹಿವಾಟಿನ ಮೇಲೆ 1ರಿಂದ 2 ರೂಪಾಯಿ ಪ್ರೊಸೆಸಿಂಗ್ ಶುಲ್ಕ ತಗಲುತ್ತದೆ. 50 ರೂಪಾಯಿ ಒಳಗಿನ ಮೊಬೈಲ್ ರೀಚಾರ್ಜ್ ಮಾಡಿದಲ್ಲಿ ಶುಲ್ಕ ಇರುವುದಿಲ್ಲ. ಆದರೆ 50ರಿಂದ 100 ರೂಪಾಯಿ ಮಧ್ಯೆ ರೀಚಾರ್ಜ್ ಮಾಡಿಸಿದರೆ 1 ರೂಪಾಯಿ ಶುಲ್ಕ ವಿಧಿಸುತ್ತದೆ. 100 ರೂಪಾಯಿ ಮೇಲ್ಪಟ್ಟು ಮೊಬೈಲ್ ರೀಚಾರ್ಜ್ ಮಾಡಿಸಿದರೆ ಫೋನ್ಪೇ ಗ್ರಾಹಕರು ರೂ. 2 ವಿಧಿಸುತ್ತದೆ.
ಸದ್ಯ ಇದು ಸಣ್ಣ ಪ್ರಮಾಣದ ಪ್ರಯೋಗ ಎಂದು ಕಂಪೆನಿ ಹೇಳಿದೆ. ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಗೆ ಇತರ ಪ್ಲಾಟ್ಫಾರ್ಮ್ನಂತೆಯೇ ಫೋನ್ಪೇ ಕೂಡ ದರ ವಿಧಿಸಲಿದೆ.
ಥರ್ಡ್ ಪಾರ್ಟಿ ಆಯಪ (ಅಪ್ಲಿಕೇಷನ್) ಪೈಕಿ ಯುಪಿಐ ವಹಿವಾಟಿನಲ್ಲಿ ಫೋನ್ಪೇ ದೊಡ್ಡ ಮಟ್ಟದ ಪಾಲು ಹೊಂದಿದೆ. ಸೆಪ್ಟೆಂಬರ್ ತಿಂಗಳೊಂದರಲ್ಲಿಯೇ ಇದು ಸುಮಾರು 165 ಕೋಟಿ ಯುಪಿಐ ವಹಿವಾಟು ಮಾಡಿದೆ. ಫ್ಲಿಪ್ಕಾರ್ಟ್ನ ಮಾಜಿ ಅಧಿಕಾರಿಗಳಾದ ಸಮೀರ್ ನಿಗಮ್, ರಾಹುಲ್ ಚಾರಿ ಮತ್ತು ಬುರ್ಜಿನ್ ಎಂಜಿನೀರ್ ಸೇರಿ 2015ರಲ್ಲಿ ಫೋನ್ಪೇ ಸ್ಥಾಪಿಸಿದ್ದು, ಸದ್ಯ ಇದಕ್ಕೆ ಸುಮಾರು 30 ಕೋಟಿ ನೋಂದಾಯಿತ ಬಳಕೆದಾರರಿದ್ದಾರೆ.