ನವದೆಹಲಿ: ದೇಶಾದ್ಯಂತ ಶಾಲೆಗಳು ಸುರಕ್ಷಿತವಾಗಿ ಕಾರ್ಯನಿರ್ವಹಿಸಲಿವೆ. ಶಾಲೆಗಳನ್ನು ಹೆಚ್ಚು ವಿದ್ಯಾರ್ಥಿ ಸ್ನೇಹಿ ಮತ್ತು ಸುರಕ್ಷಿತವಾಗಿಸಲು ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಮಾರ್ಗಸೂಚಿಗಳ ಅಡಿಯಲ್ಲಿ ಮಕ್ಕಳ ಸುರಕ್ಷತೆಯನ್ನು ಉಲ್ಲಂಘಿಸುವ ಸಂಸ್ಥೆಗಳು ಭಾರೀ ದಂಡ ಮತ್ತು ಶಿಕ್ಷೆ ಎದುರಿಸಬೇಕಾಗುತ್ತದೆ. ಶಾಲೆಗಳು ತಮ್ಮ ವಾರ್ಷಿಕ ಆದಾಯದ ಶೇಕಡಾ 5 ರಷ್ಟು ದಂಡದಿಂದ ಮಾನ್ಯತೆ ರದ್ದುಗೊಳಿಸುವವರೆಗೆ ದಂಡವನ್ನು ಎದುರಿಸಬೇಕಾಗುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ವಿದ್ಯಾರ್ಥಿಗಳ ಸುರಕ್ಷತೆಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳುವಲ್ಲಿ ವಿಫಲತೆ, ಬಡಿಸಿದ ಆಹಾರದ ಗುಣಮಟ್ಟದಲ್ಲಿ ಕುಸಿತ ಮತ್ತು ತುರ್ತು ಸಂದರ್ಭಗಳಲ್ಲಿ ವೈದ್ಯಕೀಯ ನೆರವು ನೀಡಲು ವಿಫಲವಾದರೆ ಕ್ರಮ ಜರುಗಿಸಲಾಗುವುದು. ದೈಹಿಕ ಮತ್ತು ಮಾನಸಿಕ ಕಿರುಕುಳ, ತಾರತಮ್ಯದ ಕ್ರಮಗಳು, ವಿದ್ಯಾರ್ಥಿಗಳ ದೂರುಗಳಿಗೆ ಕಿವಿಗೊಡದಿರುವುದು, ವಿಕಲಚೇತನ ಮಕ್ಕಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ವಿಫಲತೆ ಮತ್ತು ಕೊರೊನಾ ಮಾರ್ಗಸೂಚಿಗಳನ್ನು ಅನುಸರಿಸದಿರುವುದು ಮುಂತಾದ ವಿಷಯಗಳ ಮೇಲೆ ಇನ್ನು ಬಲವಾದ ಕ್ರಮ ಕೈಗೊಳ್ಳಲಾಗುವುದು.