ಮಂಜೇಶ್ವರ: ವರ್ಕಾಡಿ ದೇವಂದಪಡ್ಪು ಶ್ರೀ ಮಹಾ ವಿಷ್ಣು ದೇವಸ್ಥಾನದ ವಾರ್ಷಿಕ ಜಾತ್ರೆ ಮಹೋತ್ಸವ ನ. 18 ರಂದ ಬುಧವಾರ ನಡೆಯಲಿದ್ದು, ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವನ್ನು ಕ್ಷೇತ್ರದ ವಠಾರದಲ್ಲಿ ನಡೆಯಿತು.
ಕ್ಷೇತ್ರದ ಅರ್ಚಕ ರಾಘವೇಂದ್ರ ಆಚಾರ್ಯ ಅವರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು. ಈ ಸಂದರ್ಭ ಹಿರಿಯರಾದ ಕೆ. ಶೀನ ಶೆಟ್ಟಿ ಕೆದುಂಬಾಡಿ, ಚಂದ್ರಹಾಸ ಪೂಜಾರಿ ಮುಡಿಮಾರ್, ಐತ್ತಪ್ಪ ಶೆಟ್ಟಿ ದೇವಂದಪಡ್ಪು, ನಾರಾಯಣ ಪೂಜಾರಿ ಕೆದುಂಬಾಡಿ , ಪ್ರೇಮಾನಂದ ರೈ ನೆತ್ತಿಲ, ರವಿ ಮುಡಿಮಾರ್, ಶ್ಯಾಂಭ ನಾಯಗ್, ಮಾಧವ ಪೂಜಾರಿ ಕುದುಕೋರಿ, ಯತೀರಾಜ್ ಶೆಟ್ಟಿ ಕೆದುಂಬಾಡಿ, ಹರ್ಷಿತ್ ಶೆಟ್ಟಿ ನೆತ್ತಿಲ, ಪ್ರಜ್ವಲ್ ಶೆಟ್ಟಿ ಕೆದುಂಬಾಡಿ, ಆದರ್ಶ್ ಶೆಟ್ಟಿ ಕೆದುಂಬಾಡಿ ಮೊದಲಾದವರು ಉಪಸ್ಥಿತರಿದ್ದರು.