ಪತ್ತನಂತಿಟ್ಟು: ಮೂರುವರೆ ಶತಮಾನಗಳ ಹಿಂದೆ ಶಬರಿಮಲೆ ದೇವಸ್ಥಾನವು ದ್ರಾವಿಡರ ಆರಾಧನಾ ಸ್ಥಳವಾಗಿತ್ತು ಎಂದು ಸೂಚಿಸುವ ರಾಜ ಮುದ್ರೆಯನ್ನು ಹೊಂದಿರುವುದಾಗಿ ಮಾನ್ಸನ್ ಮಾವುಂಕಲ್ ಹೇಳಿಕೊಂಡಿದ್ದಾನೆ. ಮಹಿಳೆಯರ ಪ್ರವೇಶ ವಿವಾದದ ಸಮಯದಲ್ಲಿ ಈ ದಾಖಲೆಗಳು ವಿವಾದಾಸ್ಪದವಾಗಿದ್ದವು.
ಪಂದಳಂ ಅರಮನೆ ಕಾರ್ಯಕಾರಿ ಸಮಿತಿಯ ಅಧ್ಯಕ್ಷ ಶಶಿಕುಮಾರ ವರ್ಮಾ ಅವರು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಮತ್ತು ರಾಜ್ಯ ಸರ್ಕಾರಕ್ಕೆ ಈ ಹೇಳಿಕೆಗಳ ದಾಖಲೆಯ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕೆಂದು ಆಗ್ರಹಿಸಿರುವರು. ಮಾಧ್ದಯಮ ಸಂದರ್ಶನವೊಂದರಲ್ಲಿ ಈ ಬಗ್ಗೆ ಆಗ್ರಹಿಸಲಾಗಿದೆ.
ಶಬರಿಮಲೆ ಮಹಿಳಾ ಪ್ರವೇಶ ವಿವಾದವು ಉಲ್ಬಣಗೊಳ್ಳುತ್ತಿರುವ ಸಮಯದಲ್ಲಿ ಮಾನ್ಸನ್ ಮಾವುಂಗಲ್ ಸಂಗ್ರಹದಿಂದ ದಾಖಲೆಗಳನ್ನು ಬಿಡುಗಡೆಮಾಡಲಾಗಿತ್ತು. ಮಾನ್ಸನ್ ತನ್ನಲ್ಲಿರುವ ರಾಜಮುದ್ರೆಗೆ 351 ವರ್ಷ ಪ್ರಾಚೀನತೆಯದು ಎಂದು ಹೇಳಿಕೊಂಡಿದ್ದ. ಶಬರಿಮಲೆಯ ಆಚರಣೆಗಳಲ್ಲಿ ಲಭ್ಯವಿರುವ ಅತ್ಯಂತ ಹಳೆಯ ಮಾಹಿತಿ ಇದಾಗಿದೆ. ಅದು ಡಾಕ್ಯುಮೆಂಟ್ ಎಂದು ವ್ಯಾಖ್ಯಾನಗಳು ಇದ್ದವು. ಪಂದಲಂ ಅರಮನೆಯು ಇದರ ಸತ್ಯಾಸತ್ಯತೆಯನ್ನು ಹೊರಗೆ ತರಬೇಕೆಂದು ಬಯಸುತ್ತದೆ. ಈ ದಾಖಲೆಗಳು ಎಲ್ಲಿಂದ ಬಂದವು ಎಂಬುದನ್ನು ನಾವು ಕಂಡುಹಿಡಿಯಬೇಕು ಎಂದು ಒತ್ತಾಯಿಸಿದೆ.
ಅನೇಕರು ಈ ಡಾಕ್ಯುಮೆಂಟ್ ನ್ನು ಅಧಿಕೃತವಾಗಿ ಚರ್ಚೆಗಳಲ್ಲಿ ಉಲ್ಲೇಖಿಸಿದ್ದಾರೆ. ದೇಶಾಭಿಮಾನಿ ಸೇರಿದಂತೆ ಮಾಧ್ಯಮಗಳು ಮಾನ್ಸನ್ ದಾಖಲೆಗಳ ಬಗ್ಗೆ ವರದಿ ಮಾಡಿವೆ.
ಏತನ್ಮಧ್ಯೆ, ಗುಪ್ತಚರ ಘಟಕವು ಮಾನ್ಸನ್ ಮಾವುಂಗಲ್ ನ ಪೋಲಿಸ್ ಸಂಪರ್ಕಗಳ ಬಗ್ಗೆ ತನಿಖೆ ಆರಂಭಿಸಿದೆ. ಮಾನ್ಸನ್ ಸ್ನೇಹಿತರ ವಲಯಕ್ಕೆ ಉನ್ನತ ಮಟ್ಟದ ಪೋಲೀಸ್ ಅಧಿಕಾರಿಗಳು ಹೇಗೆ ಬಂದರು ಎಂಬುದರ ಕುರಿತು ತನಿಖೆ ಆರಂಭಿಸಲಾಗಿದೆ. ಎರ್ನಾಕುಳಂ ಮತ್ತು ಆಲಪ್ಪುಳ ಜಿಲ್ಲೆಗಳಲ್ಲಿ ಕೆಲಸ ಮಾಡಿದ ಕೆಲವು ಉನ್ನತ ಅಧಿಕಾರಿಗಳ ಚಟುವಟಿಕೆಗಳ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದು ವರದಿಯಾಗಿದೆ.