ಕಾಸರಗೋಡು: ತಮ್ಮ 15ನೇ ವರ್ಷ ಪ್ರಾಯದಿಂದ ಕೃಷಿ ಬದುಕನ್ನು ಅವಲಂಬಿಸಿ 70 ವರ್ಷದ ವರೆಗೂ ಮುಂದುವರಿಸುತ್ತಿರುವ ಹಿರಿಯ ಸಾಧಕ ಎನ್.ವಿ.ಪದ್ಮನಾಭ ಅವರನ್ನು ಕಾಸರಗೋಡು ಕೃಷಿಭವನ ವತಿಯಿಂದ ಅಭಿನಂದಿಸಲಾಯಿತು.
ನೆಲ್ಲಿಕುಂಜೆ ನಿವಾಸಿಯಾಗಿರುವ ಇವರು 14 ಎಕ್ರೆ ಜಾಗವನನು ಲೀಸ್ ಗೆ ಪಡೆದು ಅವರು ಕೃಷಿ ಮುಂದುವರಿಸುತ್ತಿದ್ದಾರೆ. ಬಂಜರು ಜಾಗದಲ್ಲಿ ಭತ್ತದ ಕೃಷಿ ನಡೆಸುವ ಪ್ರಕ್ರಯೆಗೆ ಬೆಂಬಲ ನೀಡುವ, ಯುವಜನತೆಯನ್ನು ಕೃಷಿಯತ್ತ ಸೆಳೆಯುವ ಇತ್ಯಾದಿ ಕಾಯಕದಲ್ಲೂ ಅವರು ತೊಡಗಿಕೊಂಡಿದ್ದಾರೆ. ಕಾಸರಗೋಡು ನಗರಸಭೆ ವ್ಯಾಪ್ತಿಯ ಅಡ್ಕತ್ತಬೈಲು ಗದ್ದೆ ಸಮಿತಿಯ ಅಧ್ಯಕ್ಷರೂ ಇವರಾಗಿದ್ದಾರೆ. ಪ್ರಧಾನ ಕೃಷಿ ಅಧಿಕಾರಿ ಆರ್.ವೀಣಾರಾಣಿ ಕೃಷಿಸಾಧಕರನ್ನು ಅಭಿನಂದಿಸಿದರು.