ಲಂಡನ್: ಜಗತ್ತಿನಾದ್ಯಂತ 4- 5 ಗಂಟೆಗಳ ಕಾಲ ಫೇಸ್ ಬುಕ್ ಸಂಪರ್ಕ ಸ್ಥಗಿತಗಂಡಿದ್ದಕ್ಕೆ ಹ್ಯಾಕಿಂಗ್ ಕಾರಣವಲ್ಲ ಎಂದು ಫೇಸ್ ಬುಕ್ ಮೂಲಭೂತ ಸೌಕರ್ಯ ಉಪಾಧ್ಯಕ್ಷ ಸಂತೋಷ್ ಜನಾರ್ಧನ್ ಸ್ಪಷ್ಟನೆ ನೀಡಿದ್ದಾರೆ.
ದೈನಿಕ ನಿರ್ವಹಣೆ ಹಾರ್ಯದಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಫೇಸ್ ಬುಕ್ ಸಂಪರ್ಕ ಸ್ಥಗಿತಗೊಂಡಿತ್ತು ಎಂದು ಸಂತೋಷ್ ಜನಾರ್ಧನ್ ಬ್ಲಾಗ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಸೋಮವಾರ ರಾತ್ರಿ 7 ರಿಂದ 12 ಗಂಟೆಯ ತನಕ ಫೇಸ್ ಬುಕ್ ಬಳಸಲಾಗದೆ ಬಳಕೆದಾರರು ಪರದಾಡಿದ್ದರು. ಫೇಸ್ ಬುಕ್ ಮಾತ್ರವಲ್ಲದೆ ಅದರ ಅಂಗಸಂಸ್ಥೆಯಾದ ವಾಟ್ಸ್ ಆಪ್, ಇನ್ ಸ್ಟಾಗ್ರಾಂ ಸೇವೆಗಳೂ ಸ್ಥಗಿತಗೊಂಡಿದ್ದವು.
ವ್ಯತ್ಯಯದ ಹಿಂದೆ ಹ್ಯಾಕರ್ ಗಳ ಕೈವಾಡವಿರುವ ಶಂಕೆ ಈ ಹಿಂದೆ ವ್ಯಕ್ತವಾಗಿತ್ತು. ಈ ಬಗ್ಗೆ ಹಲವು ಮಂದಿ ಫೇಸ್ ಬುಕ್ ಬಳಕೆದಾರರು ಆತಂಕಿತರಾಗಿದ್ದರು. ಈ ಆತಂಕಗಳಿಗೆ ಫೇಸ್ ಬುಕ್ ತೆರೆಯೆಳೆದಿದೆ.