HEALTH TIPS

ಕೆಪಿಸಿಸಿ ಕಾರ್ಯದರ್ಶಿ ಸತ್ಯನ್ ಕಟಿಯಂಗಾಡ್ ರ ಪುತ್ರಿ ವಾಹನ ಅಪಘಾತದಲ್ಲಿ ದುರ್ಮರಣ

                ಕೋಝಿಕ್ಕೋಡ್: ಕೆಪಿಸಿಸಿ ಕಾರ್ಯದರ್ಶಿ ಸತ್ಯನ್ ಕಟಿಯಂಗಾಡ್ ಅವರ ಪುತ್ರಿ ಅಹಲ್ಯಾ ಕೃಷ್ಣ ಕೋಝಿಕ್ಕೋಡ್‍ನ ಕೂತಾಲಿಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಅಹಲ್ಯಾ ಸ್ಕೂಟರ್‍ನಲ್ಲಿ ಹೋಗುತ್ತಿದ್ದಾಗ ಲಾರಿ ಡಿಕ್ಕಿ ಹೊಡೆದಿದೆ. ಕೋಝಿಕ್ಕೋಡ್ ಡಿಸಿಸಿಯಲ್ಲಿ ಇಂದಿರಾಗಾಂಧಿ ಸ|ಂಸ್ಮರಣಾ ಸಮಾರಂಭದ  ಸಿದ್ಧತೆ ನಡೆಯುತ್ತಿದ್ದ ವೇಳೆ ಅಪಘಾತದ ಘಟನೆ ತಿಳಿದುಬಂದಿದೆ. 

                  ಅಹಲ್ಯಾ ಪೆರಂಬ್ರಾದಿಂದ ಕುಟ್ಟಿಯಾಡಿಗೆ ತೆರಳುತ್ತಿದ್ದಾಗ ಅಪಘಾ|ತ ನಡೆದಿದೆ.  ಬೆಳಗ್ಗೆ 11.30ರ ಸುಮಾರಿಗೆ ಅಪಘಾತ ಸಂಭವಿಸಿದೆ. ಪೆರಂಬ್ರಾ-ಕುಟ್ಟಿಯಾಡಿ ರಸ್ತೆಯಲ್ಲಿ ಅಹಲ್ಯಾ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ತೆರಳುತ್ತಿದ್ದ ವೇಳೆ ಲಾರಿ ಡಿಕ್ಕಿ ಹೊಡೆದಿದೆ.

           ಇದೇ ದಾರಿಯಲ್ಲಿ ಸಾಗುತ್ತಿದ್ದ ಲಾರಿ ಎದುರಿಗೆ ಬರುತ್ತಿದ್ದ ವಾಹನಕ್ಕೆ ಡಿಕ್ಕಿಹೊಡೆದಿದ್ದು ಈ ವೇಳೆ ಅಹಲ್ಯಾ ಅವರ ಸ್ಕೂಟರ್ ಗೂ ಡಿಕ್ಕಿ ಹೊಡೆದಿದೆ ಎಂದು ಪೋಲೀಸರು ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries