ಕಾಸರಗೋಡು: ಮಂಜೇಶ್ವರ ಗ್ರಾಮ ಪಂಚಾಯತ್ ನಲ್ಲಿ ಪ್ರಾಜೆಕ್ಟ್ ಅಸಿಸ್ಟೆಂಟ್ ಅವರ ಒಂದು ಹುದ್ದೆ ಬರಿದಾಗಿದೆ. ರಾಜ್ಯ ತಾಂತ್ರಿಕ ಪರೀಕ್ಷೆ ನಿಯಂತ್ರಣಾಧಿಕಾರಿ/ ತಾಂತ್ರಿಕ ಶಿಕ್ಷಣ ಮಂಡಳಿ ನಡೆಸುವ ಮೂರು ವರ್ಷದ ಡಿಪೆÇ್ಲಮಾ ಇನ್ ಕಮರ್ಶಿಯಲ್ ಪ್ರಾಕ್ಟೀಸ್(ಡಿ.ಸಿ.ಪಿ./ಡಿಪೆÇ್ಲಮಾ ಇನ್ ಕಂಪ್ಯೂಟರ್ ಅಪ್ಲಿಕೇಷನ್ ಆಮಡ್ ಬಿಸಿನೆಸ್ ಮೆನೆಜ್ ಮೆಂಟ್ ತೇರ್ಗಡೆಹೊಂದಿರುವ ಯಾ ಕೇರಳದ ವಿವಿಗಳು ಅಂಗೀಕರಿಸಿರುವ ಪದವಿ ಜೊತೆಗೆ ಒಂದು ವರ್ಷಕ್ಕಿಂತ ಕಡಿಮೆಯಿಲ್ಲದ ಅಂಗೀಕೃತ ಡಿಪೆÇ್ಲಮಾ ಇನ್ ಕಂಪ್ಯೂಟರ್ ಅಪ್ಲಿಕೇಷನ್ ಅಥವಾ ಪಿ.ಜಿ.ಡಿ.ಸಿ. ತೇರ್ಗಡೆಹೊಂದಿರುವವರು ಅರ್ಜಿ ಸಲ್ಲಿಸಬಹುದು. ವಯೋಮಿಯಿ 18ರಿಂದ 30 ವರ್ಷ. ಪರಿಶಿಷ್ಟ ಜಾತಿ-ಪಂಗಡವರಿಗೆ 3 ವರ್ಷಗಳ ರಿಯಾಯಿತಿ ಇದೆ. ಮಂಜೇಶ್ವರ ಗ್ರಾಮ ಪಂಚಾಯತ್ ನ ಶಾಶ್ವತ ನಿವಾಸಿಗಳಿಗೆ ಆದ್ಯತೆಯಿದೆ. ಆಸಕ್ತರು ನ.5ರಂದು ಸಂಜೆ 5 ಗಂಟೆಗೆ ಮುಂಚಿತವಾಗಿ ಪಂಚಾಯತ್ ಕಚೇರಿಗೆ ಅರ್ಜಿ ಸಲ್ಲಿಸಬೇಕು. ಸಂದರ್ಶನ ನ.8ರಂದು ಬೆಳಗ್ಗೆ 11 ಗಂಟೆಗೆ ಜರುಗಲಿದೆ.