ತಿರುವನಂತಪುರ: ರಾಜ್ಯದಲ್ಲಿ ಭಾರೀ ಅತಿವೃಷ್ಠಿ ಹಾಗೂ ಬಳಿಕದ ಅನಾಹುತಗಳ ಸಂತ್ರಸ್ತರಿಗೆ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಸೋಮವಾರ ಹೇಳಿದ್ದಾರೆ. ಪ್ರಾಕೃತಿಕ ವಿಕೋಪಗಳು ಮರುಕಳಿಸುವುದನ್ನು ತಡೆಯಲು ಮತ್ತು ಪ್ರಕೃತಿಯನ್ನು ರಕ್ಷಿಸಲು ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬೇಕೆಂದು ರಾಜ್ಯಪಾಲರು ಒತ್ತಾಯಿಸಿದರು. ನೈಸರ್ಗಿಕ ವಿಕೋಪದಲ್ಲಿ ಎಲ್ಲವನ್ನೂ ಕಳೆದುಕೊಂಡವರೊಂದಿಗೆ ಕೇರಳದ ಮನಸ್ಸು ಇದೆ ಎಂದು ಅವರು ಹೇಳಿದರು.
ತಿರುವನಂತಪುರಂನ ಕಲ್ಲಿಯೂರಿನಲ್ಲಿರುವ ಪರಿಹಾರ ಶಿಬಿರಕ್ಕೆ ಭೇಟಿ ನೀಡಿದ ಬಳಿಕ ರಾಜ್ಯಪಾಲರು ಮಾಧ್ಯಮಗಳೊಂದಿಗೆ ಮಾತನಾಡಿದರು. ಕೇರಳದ ಹೊರತಾಗಿ, ದೇಶದ ಇತರ 20 ರಾಜ್ಯಗಳಲ್ಲಿಯೂ ಭಾರೀ ಮಳೆಯಾಗುತ್ತಿದೆ. ಪ್ರಸ್ತುತ ಎಲ್ಲಾ ಜನರು ಚಿಂತಿತರಾಗಿದ್ದಾರೆ. ಈ ದುರಂತವು ಪರಿಸರ ಸಂರಕ್ಷಣೆಯತ್ತ ಗಮನ ಹರಿಸುವ ಅಗತ್ಯವನ್ನು ನೆನಪಿಸುತ್ತದೆ ಎಂದು ಅವರು ಹೇಳಿದರು.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸುಮಾರು 250 ಪರಿಹಾರ ಶಿಬಿರಗಳನ್ನು ಸ್ಥಾಪಿಸಲಾಗಿದೆ. ಅಕ್ಟೋಬರ್ 12 ರಿಂದ ಪ್ರವಾಹದಲ್ಲಿ ಕನಿಷ್ಠ 39 ಜನರು ಸಾವನ್ನಪ್ಪಿದ್ದಾರೆ.