ತಿರುವನಂತಪುರಂ: ಒಂದೂವರೆ ವರ್ಷದ ಬಳಿಕ, ರಾಜ್ಯದ ಸರ್ಕಾರಿ ಮತ್ತು ಖಾಸಗಿ ಕಾಲೇಜುಗಳು ನಾಳೆ ಮತ್ತೆ ತೆರೆಯಲ್ಪಡುತ್ತವೆ. ಪೋಷಕರು ಮತ್ತು ವಿವಿಧ ಸಂಘಟಕರು ಕಾಲೇಜು ಕಟ್ಟಡ ಮತ್ತು ತರಗತಿ ಕೊಠಡಿಗಳನ್ನು ವಿದ್ಯಾರ್ಥಿಗಳಿಗೆ ಸುರಕ್ಷಿತವಾಗಿ ಅಧ್ಯಯನ ಮಾಡಲು ಸಿದ್ದಗೊಳಿಸಲು ನೆರವಾಗಿದ್ದಾರೆ. ರಾಜಕೀಯ ಪಕ್ಷದ ಸ್ವಯಂಸೇವಕರು ಗಾಂಧಿ ಜಯಂತಿಗೆ ಸಂಬಂಧಿಸಿದಂತೆ ಇದೇ ರೀತಿಯ ಸೇವಾ ಚಟುವಟಿಕೆಗಳ ಮೂಲಕ ಕಲಿಕೆಗೆ ಸುಗಮತೆ ಒದಗಿಸಿದ್ದಾರೆ.
ಆದರೆ ಮುನ್ನಾರ್‍ನಲ್ಲಿರುವ ಸರ್ಕಾರಿ ಕಾಲೇಜುಗಳು ನಾಳೆ ತೆರೆಯುವುದಿಲ್ಲ. ಮುನ್ನಾರ್ ಕಲಾ ಕಾಲೇಜು ಮತ್ತು ಎಂಜಿನಿಯರಿಂಗ್ ಕಾಲೇಜಿನ ಉದ್ಯೋಗಿಯೊಬ್ಬರು ಕೋವಿಡ್ ಬಾಧಿಸಿ ಮೃತಪಟ್ಟಿದ್ದು ಕಾಲೇಜನ್ನು ಸಂಪೂರ್ಣವಾಗಿ ಸೋಂಕುರಹಿತಗೊಳಿಸಿದ ನಂತರ ಕಾಲೇಜು ಆ ಬಳಿಕ ಆರಂಭಗೊಳ್ಳಲಿದೆ. ಮುನ್ನಾರ್ ಕಲಾ ಕಾಲೇಜಿಗೆ ಸರ್ಕಾರವು ವಿಷೇಶ ಆರ್ಥಿಕ ನೆರವನ್ನೂ ಮಂಜೂರು ಮಾಡಿದೆ. ಆದರೆ ದುರಸ್ತಿ ಪೂರ್ಣಗೊಳಿಸಲು ಒಂದು ವಾರ ಬೇಕಾಗುತ್ತದೆ ಎನ್ನಲಾಗಿದೆ.
2018 ರಲ್ಲಿ ಸಂಭವಿಸಿದ ಪ್ರವಾಹದ ನಂತರ ಭೂಕುಸಿತವು ಸಾವಿರಾರು ವಿದ್ಯಾರ್ಥಿಗಳು ಅಧ್ಯಯನ ಮಾಡುವ ಕಾಲೇಜು ಕಟ್ಟಡವನ್ನು ಸಂಪೂರ್ಣವಾಗಿ ನಾಶಪಡಿಸಿತು. ಶಿಕ್ಷಣ ಇಲಾಖೆಯ ನೇತೃತ್ವದಲ್ಲಿ, ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಮಕ್ಕಳಿಗೆ ಹೆಚ್ಚಿನ ಶಿಕ್ಷಣಕ್ಕಾಗಿ ತಾತ್ಕಾಲಿಕ ಸೌಲಭ್ಯಗಳನ್ನು ಒದಗಿಸಿತ್ತು. ಆದರೆ ಹಲವು ನ್ಯೂನತೆಗಳು ಎದುರಾದವು. ಅಲ್ಲದೆ, ಕಟ್ಟಡವನ್ನು ಕಲಾ ಕಾಲೇಜಿಗೆ ವರ್ಗಾಯಿಸುವುದರೊಂದಿಗೆ, ಎಂಜಿನಿಯರಿಂಗ್ ವಿದ್ಯಾರ್ಥಿಗಳು ಕಾರ್ಯಾಗಾರ ನಡೆಸಲು ಬೇರೆ ಕಾಲೇಜುಗಳನ್ನು ಸಂಪರ್ಕಿಸಬೇಕಾಯಿತು.