HEALTH TIPS

ವರದಿಯಾಗದ ಕ್ಷಯರೋಗ ಪ್ರಕರಣಗಳು ಭಾರತದಲ್ಲೇ ಹೆಚ್ಚು: ಡಬ್ಲ್ಯುಎಚ್‌ಒ

              ನವದೆಹಲಿ: ಕೋವಿಡ್‌-19 ಸಾಂಕ್ರಾಮಿಕದ ಕಾರಣದಿಂದಾಗಿ ಭಾರತದಲ್ಲಿ ಅತಿಹೆಚ್ಚು ಕ್ಷಯರೋಗ (ಟಿಬಿ) ಪ್ರಕರಣಗಳು ವರದಿಯಾಗಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ವರದಿ ತಿಳಿಸಿದೆ.

         2019 ಮತ್ತು 2020ರ ನಡುವೆ ಜಾಗತಿಕವಾಗಿ ಬೆಳಕಿಗೆ ಬಾರದ ಟಿಬಿ ಪ್ರಕರಣಗಳ ಪಟ್ಟಿಯಲ್ಲಿ ಭಾರತ ಹೆಚ್ಚಿನ (ಶೇ 41) ಪಾಲು ಹೊಂದಿದೆ. ಉಳಿದಂತೆ ಶೇ 14 ರಷ್ಟು ಪಾಲನ್ನು ಇಂಡೋನೇಷ್ಯಾ, ಶೇ 12 ರಷ್ಟು ಪಾಲನ್ನು ಫಿಲಿಫೈನ್ಸ್‌ ಮತ್ತು ಶೇ 8 ರಷ್ಟು ಪಾಲನ್ನು ಚೀನಾ ಹೊಂದಿದೆ.

           ಕಳೆದ ವಾರ ಪ್ರಕಟವಾದ ವರದಿಯ ಪ್ರಕಾರ ಭಾರತದಲ್ಲಿ 41 ಲಕ್ಷ ಜನರು ಕ್ಷಯರೋಗದಿಂದ ಬಳಲುತ್ತಿದ್ದಾರೆ. ಆದಾಗ್ಯೂ ಅವರು ಚಿಕಿತ್ಸೆ ಪಡೆದುಕೊಂಡಿಲ್ಲ ಮತ್ತು ಈ ಪ್ರಕರಣಗಳು ಅಧಿಕೃತವಾಗಿಯೂ ದಾಖಲಾಗಿಲ್ಲ ಎಂದು ಡಬ್ಲ್ಯುಎಚ್‌ಒ ಅಂದಾಜಿಸಿದೆ. ಈ ಸಂಖ್ಯೆ 2019 ರಲ್ಲಿ 29 ಲಕ್ಷದಷ್ಟಿತ್ತು.

          ಜಾಗತಿಕವಾಗಿ ಕ್ಷಯರೋಗಕ್ಕೆ ಚಿಕಿತ್ಸೆ ಪಡೆಯುವಿಕೆಯಲ್ಲಿಯೂ ಋಣಾತ್ಮಕ ಪ್ರವೃತ್ತಿ ಹೆಚ್ಚಾಗಿದೆ. 2019ರಲ್ಲಿ ಶೇ 72 ರಷ್ಟು ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದರು. ಅದು ಈಗ ಶೇ 59ಕ್ಕೆ ಇಳಿದಿದೆ ಎಂದು ವರದಿ ಉಲ್ಲೇಖಿಸಿದೆ.

           ಟಿಬಿ ಕಾಯಿಲೆಯಿಂದಾಗಿ 2020 ರಲ್ಲಿ ವಿಶ್ವದಾದ್ಯಂತ 15 ಲಕ್ಷ (ಎಚ್‌ಐವಿ ದೃಢಪಟ್ಟಿದ್ದ 2,14,000 ರೋಗಿಗಳು ಸೇರಿ) ಜನರು ಮೃತಪಟ್ಟಿದ್ದಾರೆ. ಭಾರತ ಸೇರಿದಂತೆ ಹೆಚ್ಚು ಕ್ಷಯ ಪ್ರಕರಣಗಳು ಇರುವ ಒಟ್ಟು 30 ದೇಶಗಳಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಿರುವುದು ಕಂಡು ಬಂದಿದೆ. 2021 ಮತ್ತು 2022ರ ನಡುವೆ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸೂಚನೆ ನೀಡಿದೆ ಎಂದು ಡಬ್ಲ್ಯುಎಚ್‌ಒ ಎಚ್ಚರಿಸಿದೆ.

               ಅತಿಹೆಚ್ಚು ಕ್ಷಯ ಪ್ರಕರಣಗಳನ್ನು ಹೊಂದಿರುವ ಎಂಟು ರಾಷ್ಟ್ರಗಳು ಜಾಗತಿಕ ಪ್ರಕರಣಗಳಲ್ಲಿ ಮೂರನೇ ಒಂದರಷ್ಟು ಪಾಲು ಹೊಂದಿವೆ. ಈ ಪಟ್ಟಿಯಲ್ಲಿ ಭಾರತ ಮುಂದಿದೆ. ಜಾಗತಿಕ ಪ್ರಕರಣಗಳ ಶೇ 26 ರಷ್ಟು ದೇಶದಲ್ಲೇ ಇವೆ. ನಂತರದ ಸ್ಥಾನಗಳಲ್ಲಿ ಚೀನಾ (ಶೇ 8.5), ಇಂಡೋನೇಷ್ಯಾ (ಶೇ 8.4), ಫಿಲಿಫೈನ್ಸ್‌ (ಶೇ 6), ಪಾಕಿಸ್ತಾನ (ಶೇ 5.8), ನೈಜೀರಿಯಾ (ಶೇ 4.6), ಬಾಂಗ್ಲಾದೇಶ (ಶೇ 3.6) ಮತ್ತು ದಕ್ಷಿಣ ಆಫ್ರಿಕಾ (ಶೇ 3.3) ಇವೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries