ಕಾಸರಗೋಡು: ಜಿಲ್ಲೆಯಲ್ಲಿ ಬೀದಿ ಶ್ವಾನಗಳ ಹಾವಳಿ ಮತ್ತೆ ತೀವ್ರಗೊಂಡಿದ್ದು, ಸೋಮವಾರ ಐವರು ನಾಗರಿಕರ ಮೇಲೆ ಶ್ವಾನವೊಂದು ಎರಗಿದ್ದು, ಐವರು ಗಾಯಗೊಂಡಿದ್ದಾರೆ.
ಕಾಞಂಗಾಡ್ ಮುಳಪ್ಪರ ಸೋಜಿ (48), ಪ್ರತಿಭಾನಗರದ ಆಟೋ ಚಾಲಕ ಮುರಳೀಧರನ್ (39), ಕುಪ್ಪಮದ್ ವಿಬಿನ್ (23), ಮೂಲಪ್ಪರ ನಿತೀಶ್ (13) ಮತ್ತು ಪಟ್ಟಾಲಂನ ಸುದರ್ಶನನ್ (13) ಎಂಬವರ ಮೇಲೆ ನಾಯಿ ದಾಳಿ ನಡೆಸಿದೆ. ಇದರಿಂದ ಕುಪಿತಗೊಂಡ ಸ್ಥಳೀಯರು ನಾಯಿಯನ್ನು ಹೊಡೆದು ಸಾಯಿಸಿದ್ದಾರೆ.
ಈ ಮೊದಲು ಹುಚ್ಚು ನಾಯಿಯೊಂದು ಕಾಸರಗೋಡಿನ ಜನರನ್ನು ಭಯಭೀತಗೊಳಿಸಿತ್ತು. ಈ ಹಿಂದೆ ಒಂಬತ್ತು ವರ್ಷದ ಹುಡುಗನನ್ನು ನಾಯಿ ಕಚ್ಚಿತ್ತು. ಆ ದಿನ 4 ಕ್ಕೂ ಹೆಚ್ಚು ಜನರನ್ನು ನಾಯಿ ಕಚ್ಚಿದೆ. ಈ ಪ್ರದೇಶದಲ್ಲಿ ಬೀದಿ ನಾಯಿಗಳ ನಿಯಂತ್ರಣದ ವಿರುದ್ದ ಬಲವಾದ ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆಗಳು ಹೆಚ್ಚಾಗಿದ್ದವು, ಆದರೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ.