ಕಾಸರಗೋಡು: ವಿಶೇಷ ಪರಿಶೀಲನೆ, ಸಂರಕ್ಷಣೆ ಖಚಿತಪಡಿಸುವ ನಿಟ್ಟಿನಲ್ಲಿ ರಚಿಸಲಾದ ಕಾನೂನುಗಳನ್ನು ದುರುಪಯೋಗಪಡಿಸಕೂಡದು ಎಂದು ರಾಜ್ಯ ಮಹಿಳಾ ಆಯೋಗ ಸದಸ್ಯೆ ಷಾಹಿದಾ ಕಮಾಲ್ ಅಭಿಪ್ರಾಯಪಟ್ಟರು.
ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜರುಗಿದ ರಾಜ್ಯ ಮಹಿಳಾ ಆಯೋಗದ ಮೆಗಾ ಅದಾಲತ್ ವೇಳೆ ಅವರು ಮಾತನಾಡಿದರು.
ಕೆಲವು ಪ್ರಕರಣಗಳು ಇಂಥಾ ವಿಚಾರವನ್ನು ಸಾಬೀತು ಪಡಿಸುತ್ತಿವೆ ಎಂದವರು ತಿಳಿಸಿದರು.
ಅದಾಲತ್ ನಲ್ಲಿ 29 ದೂರುಗಳನ್ನು ಪರಿಶೀಲಿಸಲಾಗಿತ್ತು. ಇವುಗಳಲ್ಲಿ 6 ಪ್ರಕರಣಗಳಿಗೆ ತೀರ್ಪು ನೀಡಲಾಗಿದೆ. 23 ದೂರುಗಳನ್ನು ಮುಂದಿನ ಅದಾಲತ್ ನಲ್ಲಿ ಪರಿಶೀಲಿಸುವುದಾಗಿ ತಿಳಿಸಲಾಗಿದೆ.
ಪತಿ ಮತ್ತು ಪತ್ನಿ ವಿಚ್ಛೇದನೆಗೊಂಡಿರುವ ಪ್ರಕರಣವೊಂದಕ್ಕೆ ಸಂಬಂಧಿಸಿ ಮೊದಲ ಸಿಟ್ಟಿಂಗ್ ನಲ್ಲೇ ತೀರ್ಪು ನೀಡಲಾಗಿದೆ. ಇವರ ಮಕ್ಕಳೂ ಹಾಜರಾಗಿದ್ದರು. ವಿಸ್ತೃತ ಕೌನ್ಸಿಲಿಂಗ್ ನ ನಂತರ ದಂಪತಿಯನ್ನು ಒಗ್ಗೂಡಿಸಿರುವುದಾಗಿ ಷಾಹಿದಾ ಕಮಾಲ್ ತಿಳಿಸಿದರು.
ಸತತ ಎರಡು ಸಿಟ್ಟಿಂಗ್ ನಲ್ಲೂ ಪ್ರತಿಕಕ್ಷಿ ಹಾಜರಾಗದೇ ಇರುವ ಪ್ರಕಟರಣವೊಂದರಲ್ಲಿ ಪ್ರತಿಕಕ್ಷಿಗೆ ನೋಟೀಸು ಸ್ಥಳೀಯ ಪೆÇಲೀಸರಿಗೆ ಆದೇಶ ನೀಡಲಾಗಿದೆ. ನ್ಯಾಯವಾದಿಗಳ ಪಾನೆಲ್ ನ ರೇಣುಕಾ ದೇವಿ ತಂಗಚ್ಚಿ ಎಸ್., ಸಿಂಧು ಪಿ. ಉಪಸ್ಥಿತರಿದ್ದರು.