HEALTH TIPS

ಹೋಟೆಲ್ ಗಳಲ್ಲಿ ಆಹಾರದ ಗುಣಮಟ್ಟ ಕುಸಿತ: ಹಲವೆಡೆ ಹೆಚ್ಚಿದ ದೂರುಗಳು

 

                 ಕಾಸರಗೋಡು: ಕೋವಿಡ್ ನಿಯಂತ್ರಣಗಳಲ್ಲಿ  ವಿನಾಯಿತಿ ಘೋಷಿಸಿದ ಬಳಿಕ ಹೋಟೆಲ್ ಗಳಲ್ಲಿ ಆಹಾರದ ಗುಣಮಟ್ಟಕ್ಕೆ ಸಂಬಂಧಿಸಿದ ದೂರುಗಳು ಹೆಚ್ಚುತ್ತಿವೆ. ಕೋಝಿಕ್ಕೋಡ್ ನ ಹೋಟೆಲ್ ಒಂದರಲ್ಲಿ ಊಟ ಮಾಡಿದ ಮೂವರು ಸದಸ್ಯರ ಕುಟುಂಬವು ಹಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ ಎಂದು ತಿಳಿದುಬಂದಿದೆ. ಮುಬಾರಕ್ ಅಹ್ಮದ್ ಎಂಬವರು ಮೂರು ದಿನಗಳ ಹಿಂದೆ ಹೋಟೆಲ್ ಒಂದರಿಂದ ಆಹಾರ ಖರೀದಿಸಿ ತನ್ನ ತಾಯಿ ಮತ್ತು ಪತ್ನಿಯೊಂದಿಗೆ ಮನೆಯಲ್ಲಿ ಸೇವಿಸಿದ್ದರು. ಮಧ್ಯರಾತ್ರಿಯಿಂದ ಮೂವರೂ ಅಸ್ವಸ್ಥರಾಗಲು ಪ್ರಾರಂಭಿಸಿ ಆಸ್ಪತ್ರೆಗೆ ದಾಖಲಾದರು. 

                   ಇದು ಮೊದಲ ಪ್ರಕರಣವಲ್ಲ. ಲಾಕ್‍ಡೌನ್ ನಿರ್ಬಂಧಗಳನ್ನು ಹಿಂಪಡೆದ ಬಳಿಕ  ತೆರೆದ ಹೋಟೆಲ್‍ಗಳಲ್ಲಿ ಆಹಾರದ ಗುಣಮಟ್ಟದ ಬಗ್ಗೆ ಪ್ರತಿದಿನ ಅನೇಕ ದೂರುಗಳು ಬರುತ್ತಿವೆ. ಆಹಾರ ಸುರಕ್ಷತಾ ಇಲಾಖೆಯ ತಪಾಸಣೆ ಕೈಬಿಟ್ಟಿದೆ ಎಂದು ಆರೋಪಿಸಲಾಗಿದೆ. ಆಹಾರ ಸುರಕ್ಷತಾ ಇಲಾಖೆಯು ತಿಂಗಳಿಗೊಮ್ಮೆ ಹೋಟೆಲ್‍ಗಳಲ್ಲಿ ಆಹಾರದ ಗುಣಮಟ್ಟವನ್ನು ಪರಿಶೀಲಿಸಬೇಕು ಎಂಬುದು ಕಾನೂನು. ಆದರೆ ಈ ತಪಾಸಣೆಯನ್ನು ಸರಿಯಾಗಿ ನಡೆಸದಿರುವುದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ. 

               ಕೋವಿಡ್ ಸಮಯದಲ್ಲಿ, ಹೋಟೆಲ್‍ಗಳಲ್ಲಿ ಕುಳಿತು ಆಹಾರ ಸೇವಿಸಲು ಅವಕಾಶವಿರಲಿಲ್ಲ. ಇದರಿಂದ ಅನೇಕ ಜನರು ಆಗಾಗ್ಗೆ ಆಹಾರವನ್ನು ಆರ್ಡರ್ ಮಾಡುತ್ತಿದ್ದರು. ಗ್ರಾಹಕರು ತಾವು ಆರ್ಡರ್ ಮಾಡುವ ಆಹಾರ ಗುಣಮಟ್ಟದ್ದಾಗಿಲ್ಲ ಮತ್ತು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರುತ್ತಾರೆ. ಹೋಟೆಲ್ ಮತ್ತು ರೆಸ್ಟೋರೆಂಟ್ ಅಸೋಸಿಯೇಷನ್ ಕೋವಿಡ್ ಪೂರ್ವ ಕಾಲದ ಅನುಭವವಿಲ್ಲದ ಅನೇಕ ಜನರು ಹೋಟೆಲ್‍ಗಳನ್ನು ಇದೀಗ ನಡೆಸಲು ಪ್ರಾರಂಭಿಸಿರುವುದು ಎಂಬ ಅಂಶವು ಆಹಾರದ ಗುಣಮಟ್ಟದ ಕೊರತೆಗೆ ಕಾರಣ ಎಂದು ಹೇಳುತ್ತಿದೆ. 

              ತರಕಾರಿ ಹಾಗೂ ಜೀನಸು ವಸ್ತುಗಳಲ್ಲೂ ಗುಣಮಟ್ಟದ ಕೊರತೆ:

       ಕೋವಿಡ್ ನಿಯಂತ್ರಣಗಳನ್ನು ಹಿಂಪಡೆದ ಬಳಿಕ ಹೋಟೆಲ್ ಗಳ ಆಹಾರದಂತೆಯೇ ತರಕಾರಿ ಮತ್ತು ಜೀನಸು ವಸ್ತುಗಳ ಗುಣಮಟ್ಟದಲ್ಲೂ ವ್ಯಾಪಕ ಕೊರತೆ ಕಂಡುಬಂದಿರುವ ಬಗ್ಗೆ ಗ್ರಾಹಕರು ಹಲವೆಡೆ ದೂರಿಕೊಂಡಿದ್ದಾರೆ. ಹಲವು ಅ|ಂಗಡಿ ಮಾಲಕರು ಕೋವಿಡ್ ಪೂರ್ವದಲ್ಲಿ ದಾಸ್ತಾನಿರಿಸಿದ್ದ ಧಾನ್ಯಗಳನ್ನು, ಇತರ ವಸ್ತುಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ತಿಳಿದುಬಂದಿದೆ. ಹಳೆಯ ಉತ್ಪನ್ನವಾದರೂ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿರುವುದು ಜನಸಾಮಾನ್ಯರ ಸಂಕಷ್ಟಕ್ಕೆ ಕಾರಣವಾಗಿದೆ. 

              ಜಿಎಸ್ ಟಿ ಹೆಸರಲ್ಲಿ ಸತಾಯಿಸುವಿಕೆ:

       ಗ್ರಾಮೀಣ ಪ್ರದೇಶಗಳ ಜನರು ಸಾಮಾನ್ಯವಾಗಿ ಈ ಹಿಂದೆ ತಮ್ಮ ವ್ಯಾಪ್ತಿಯ ಅಂಗಡಿಗಳಿಂದ ಸಾಲ ರೂಪದಲ್ಲಿ ಖರೀದಿ ನಡೆಸುತ್ತಿತ್ತು. ವಾರಕ್ಕೊಮ್ಮೆಯೋ, ತಿಂಗಳಿಗೊಮ್ಮೆಯೋ ಪಾವತಿ ನಡೆಸುವ ಕ್ರಮ ಹಿಂದಿನಿಂದಲೂ ಬಳಕೆಯಲ್ಲಿರುವುದು ಸಾಮಾನ್ಯ. ಆದರೆ ಇದೀಗ ಕೋವಿಡ್ ಬಳಿಕ ಅಂ|ಗಡಿಗಳು ಗ್ರಾಹಕರಿಂದ ಸ್ಥಳದಲ್ಲೇ ಹಣ ನೀಡಿ ಖರೀದಿಸಲು ಒತ್ತಡ ಹೇರುತ್ತಿರುವುದೂ ಗಮನಕ್ಕೆ ಬಂದಿದೆ. ಇದರಿಂದ ಬಡ-ಮಧ್ಯಮ ವರ್ಗದ, ಕೂಲಿ ಕಾರ್ಮಿಕರ ಸಹಿತ ಜನಸಾಮಾನ್ಯರು ಸಂಕಷ್ಟಕ್ಕೊಳಗಾಗಿದ್ದಾರೆ. ಅ|ಂಗಡಿ ಮಾಲಕರು ಸ್ಥಳದಲ್ಲೇ ಹಣ ನೀಡಲು ಸ|ಊಚಿಸುತ್ತಿದ್ದು, ಇಲ್ಲದಿದ್ದರೆ ಜಿ ಎಸ್ ಟಿ ಗೆ ತೊಂದರೆಗಳಾಗುತ್ತಿವೆ ಎಂದು ಹೇಳುತ್ತಾರೆ. ಕೆಲವು ಅಂಗಡಿ ಮಾಲಕರು  ಹಣ ಸ್ಥಳದಲ್ಲೇ ನೀಡದಿದ್ದರೆ ಸೂಪರ್ ಮಾರ್ಕೆಟ್ ಗಳಲ್ಲಿ ಮತ್ತು ಆನ್ ಲೈನ್ ಮಾರುಕಟ್ಟೆಗಳಿಂದ ಹೇಗೆ ಖರೀದಿಸುತ್ತೀರಿ ಎಂದು ಸತಾಯಿಸುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿದೆ.

                 ಆಹಾರ ಸುರಕ್ಷತಾ ಇಲಾಖೆ, ಗ್ರಾಹಕರ ವೇದಿಕೆಗಳು ಶೀಘ್ರ ಎಚ್ಚೆತ್ತುಕೊಳ್ಳಬೇಕೆಂದು ಜನಸಾಮಾನ್ಯರು ಆಗ್ರಹಿಸಿದ್ದಾರೆ.


           ಅಭಿಮತ: 

             ಹೋಟೆಲ್ ಗಳಲ್ಲಿ ಆಹಾರ ಗುಣಮಟ್ಟದಲ್ಲಿ ಕುಸಿತವಾಗಿರುವುದು ಹೌದು. ಈಬಗ್ಗೆ ಎಲ್ಲಿ ಹೇಗೆ ದೂರು ನೀಡಬೇಕೆಂದು ತಿಳಿಯುತ್ತಿಲ್ಲ. ಜೊತೆಗೆ ಗ್ರಾಮೀಣ ಪ್ರದೇಶಗಳ ಅಂಗಡಿಗಳು ಗುಣಮಟ್ಟದ ವಸ್ತುಗಳನ್ನು ನೀಡಬೇಕು. ನಂಬಿಕಸ್ಥ ಜನರಿಗೆ ಸಾಲ ರೂಪದಲ್ಲಿ ಈ ಹಿಂದೆ ವಸ್ತುಗಳನ್ನು ನೀಡುತ್ತಿದ್ದುದನ್ನು ಮುಂದುವರಿಸಬೇಕು. ಇದರಿಂದ ಆರ್ಥಿಕ ಸಂಕಷ್ಟದಿಂದ ಕಂಗೆಟ್ಟಿರುವ ಜನರಿಗೆ ನೆರವಾಗಲಿದೆ. ಸತಾಯಿಸುವಿಕೆ ಸಲ್ಲದು. 

                                                                                                                                      ಗೋಪಾಲಕೃಷ್ಣ ಕೆ.ಕುಂಬಳೆ


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries