ಮುಳ್ಳೇರಿಯ: ಆದೂರು ಸರಕಾರಿ ಹೈಯರ್ ಸೆಕೆಂಡರೀ ಶಾಲೆಯಲ್ಲಿ ಪ್ರೌಢಶಾಲೆ ವಿಭಾಗದ ಫಿಸಿಕಲ್ ಸಯನ್ಸ್(ಕನ್ನಡ), ಕನ್ನಡ ಭಾಷಾ ಶಿಕ್ಷಕ, ಫಿಸಿಕಲ್ ಸಯನ್ಸ್ (ಮಲೆಯಾಳ), ಹಿಂದಿ; ಯುಪಿ ವಿಭಾಗದಲ್ಲಿ ಕನ್ನಡ ಮತ್ತು ಮಲೆಯಾಳ ಮಾಧ್ಯಮದಲ್ಲಿ ತಲಾ ಒಂದು ಹುದ್ಧೆ, ಎಲ್ ಪಿ ವಿಭಾಗದಲ್ಲಿ ಕನ್ನಡ ಮತ್ತು ಮಲೆಯಾಳ ಮಾಧ್ಯಮದಲ್ಲಿ ತಲಾ ಒಂದು ಹುದ್ಧೆ ಹಾಗೂ ಎಫ್‍ಟಿಸಿಎಂ ಒಂದು ಹುದ್ಧೆ ಖಾಲಿ ಇದ್ದು ದಿನ ವೇತನ ಆಧಾರದಲ್ಲಿ ನೇಮಕಾತಿ ನಡೆಯಲಿದೆ. ಅ.27ರಂದು ಬೆಳಿಗ್ಗೆ 10ಗಂಟೆಗೆ ಶಾಲೆಯ ಕಚೇರಿಯಲ್ಲಿ ನಡೆಯುವ ಸಂದರ್ಶನಕ್ಕೆ ಅಸಲಿ ಪ್ರಮಾಣ ಪತ್ರಗಳೊಂದಿಗೆ ಹಾಜರಾಗುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.