ಜೈಪುರ: 'ದೇಶದ ಅಭಿವೃದ್ಧಿಯಲ್ಲಿ ಪ್ರಜೆಗಳು ಆರೋಗ್ಯವಾಗಿರುವುದು ಮಹತ್ತರ ಪಾತ್ರ ವಹಿಸಲಿದೆ. ಪ್ರಧಾನಿ ಈ ಎರಡನ್ನೂ ಒಟ್ಟಾಗಿ ಒಯ್ಯುವುದು ಪ್ರಧಾನಿಯವರ ಆಶಯ' ಎಂದು ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್ ಮಾಂಡವಿಯಾ ಹೇಳಿದರು.
ವರ್ಚುಯಲ್ ವೇದಿಕೆಯಲ್ಲಿ ನಡೆದ ನಾಲ್ಕು ನಾಲ್ಕು ವೈದ್ಯಕೀಯ ಕಾಲೇಜುಗಳಿಗೆ ಶಂಕುಸ್ಥಾಪನೆ ಸಮಾರಂಭದಲ್ಲಿ ಅವರು, 'ಹಿಂದೆ, ಆರೋಗ್ಯ ಮತ್ತು ಅಭಿವೃದ್ಧಿಗೂ ಪರಸ್ಪರ ಸಂಬಂಧ ಇರಲಿಲ್ಲ. ಆರೋಗ್ಯವನ್ನು ಅಭಿವೃದ್ಧಿಯೊಂದಿಗೆ ಜೋಡಿಸುವುದು ದೊಡ್ಡ ವಿಚಾರ. ಇದು ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಗೆ ಹಿಡಿದ ಕನ್ನಡಿ' ಎಂದು ಸಚಿವರು ಬಣ್ಣಿಸಿದರು.
ಪ್ರಜೆಗಳು ಆರೋಗ್ಯವಾಗಿರದಿದ್ದರೆ, ಸಮಾಜ ಆರೋಗ್ಯವಾಗಿರಲು ಸಾಧ್ಯವಿಲ್ಲ. ಸಮಾಜದ ಸ್ವಾಸ್ಥ್ಯ ಚೆನ್ನಾಗಿದ್ದರೆ, ದೇಶದ ಆರೋಗ್ಯ ಕೆಡುವುದಿಲ್ಲ. ಗುಜರಾತ್‌ನಲ್ಲಿ ಇಪ್ಪತ್ತು ವರ್ಷಗಳ ಹಿಂದೆ ಆರಂಭಿಸಿದ 'ಮಾ ಅಮೃತಮ್ ಯೋಜನೆ', ಈಗ ಫಲಕೊಡುತ್ತಿದೆ. ದೇಶದ ಜನರು ಈಗ ಅದರ ಫಲಿತಾಂಶವನ್ನು ನೋಡುತ್ತಿದ್ದಾರೆ' ಎಂದು ಸ್ಮರಿಸಿದರು.