ತಿರುವನಂತಪುರಂ: ಕೃಷಿ ಬೆಳೆಗಳನ್ನು ನಾಶಗೊಳಿಸುವ ಕಾಡುಹಂದಿಗಳನ್ನು ಕೊಲ್ಲಲು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅನುಮತಿ ನೀಡಿದ್ದಾರೆ. ಬಂದೂಕು ಪರವಾನಗಿ ಹೊಂದಿರುವವರು ಮತ್ತು ಪೋಲೀಸ್ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾತ್ರ ಅವಕಾಶವಿದೆ. ವನ್ಯಜೀವಿ ಸಪ್ತಾಹ ಆಚರಣೆಯನ್ನು ಉದ್ಘಾಟಿಸಿದ ನಂತರ ಮುಖ್ಯಮಂತ್ರಿಗಳು ವನ್ಯಜೀವಿಗಳ ತೊಂದರೆಯನ್ನು ನಿಯಂತ್ರಿಸಲು 204 ಜನಜಾಗೃತಿ ಸಮಿತಿಗಳನ್ನು ರಚಿಸಲಾಗುವುದು ಎಂದು ಹೇಳಿದರು.
ರೈತರಿಗೆ ಮತ್ತು ಕೃಷಿಗೆ ಮಾತ್ರವಲ್ಲದೆ ದಾರಿಹೋಕರಿಗೆ ಕೂಡ ಬೆದರಿಕೆಯನ್ನು ಒಡ್ಡಿದ್ದರಿಂದ ಪರವಾನಗಿದಾರರಿಗೆ ಕಾಡುಹಂದಿಯನ್ನು ಹನನಗೊಳಿಸಲು ಅವಕಾಶ ನೀಡಲಾಗಿದೆ. ಕಾಸರಗೋಡು ಮುಳ್ಳೇರಿಯಾದಲ್ಲಿ ನಿನ್ನೆ ಮುಂಜಾನೆ ಕಾಡುಹಂದಿ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಪಲ್ಟಿಯಾಗಿ ಪ್ರಯಾಣಿಕರಿಗೆ ಗಾಯವಾಗಿತ್ತು. ದ್ವಿಚಕ್ರ ವಾಹನದ ಹೊಡೆತಕ್ಕೆ ಕಾಡು ಹಂದಿ ಸಾವನ್ನಪ್ಪಿದೆ. ಕಾವುಂಗಲ್ ನ ಕುಂಜಂಬು ನಾಯರ್ (60) ಗಾಯಗೊಂಡವರು. ಮರಣೋತ್ತರ ಪರೀಕ್ಷೆಯ ನಂತರ ಕಾಡುಹಂದಿಯನ್ನು ಅರಣ್ಯ ಇಲಾಖೆ ಸಮಾಧಿ ಮಾಡಿದೆ.