ಪೆರ್ಲ: ಎಣ್ಮಕಜೆ ಪಂಚಾಯಿತಿ ಬಣ್ಪುತ್ತಡ್ಕ ಯುವಧಾರ ಗ್ರಂಥಾಲಯ ಸಮಿತಿ ವತಿಯಿಂದ ಹಿರಿಯರ ದಿನಾಚರಣೆ ಮತ್ತು ಅಕ್ಷರ ಸೇನೆಯ ಗುರುತಿನ ಚೀಟಿ ವಿತರಣಾ ಸಮಾರಂಭ ಸಂಘದ ಕಚೇರಿಯಲ್ಲಿ ಜರುಗಿತು.
ಮಂಜೇಶ್ವರ ಬ್ಲಾಕ್ ಮತ್ತು ಎಣ್ಮಕಜೆ ಗ್ರಾಮ ಪಂಚಾಯಿತಿ ಲೈಬ್ರರಿ ಕೌನ್ಸಿಲ್ ಸದಸ್ಯ ರಾಮಚಂದ್ರ ಮೊಳಕ್ಕಾಲು ಸಮಾರಂಭ ಉದ್ಘಾಟಿಸಿದರು. ಬಿ.ರವಿಚಂದ್ರ ಬೊಳ್ಳಾರಮೂಲೆ ಅಧ್ಯಕ್ಷತೆ ವಹಿಸಿದ್ದರು. ಪಂಚಾಯಿತಿ ಲೈಬ್ರರಿ ಸಮಿತಿ ಸಂಚಾಲಕ ರಾಮಕೃಷ್ಣ ರೈ ಕುದ್ವ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ಸಂದರ್ಭ ಹಿರಿಯರಾದ ಜೆನಿಸ್ ಡಿ.ಸೋಜ-ಕರ್ಮಿನಾ, ಐತ್ತಪ್ಪ ನಾಯ್ಕ್-ಸರಸ್ವತೀ ದಂಪತಿಯನ್ನು ಫಲಪುಷ್ಪ ನೀಡಿ ಗೌರವಿಸಲಾಯಿತು. ಅಕ್ಷರಸೇನೆಯ ಜಿತೇಶ್, ಸುರೇಶ್, ಫರೀದ್, ಕೀರ್ತಿ, ಗ್ರಂಥಾಲಯ ಸಮಿತಿ ಸದಸ್ಯರಾದ ಈಶ್ವರ ಭಟ್ ಬಣ್ಪುತ್ತಡ್ಕ, ಮಹಮ್ಮದ್ ಪುತ್ತು ಪರಪ್ಪೆ, ಕೆ.ಎಂ ಸೂಫಿ ಬಣ್ಪುತ್ತಡ್ಕ ಉಪಸ್ಥಿತರಿದ್ದರು. ಗ್ರಂಥಾಲಯ ಸಮಿತಿ ಕಾರ್ಯದರ್ಶಿ ನಾರಾಯಣ ವೈ ಸ್ವಾಗತಿಸಿದರು.ಗ್ರಂಥಪಾಲಕಿ ಚೈತನ್ಯ ವಂದಿಸಿದರು.