HEALTH TIPS

ಅಮಿತಾಭ್ ಬಚ್ಚನ್ ಇನ್ನು ಭಾರತದ ಸದೃಢ ಪುಟ್‌ವೇರ್ 'ವಿಕೆಸಿ'ಯ ಬ್ರ್ಯಾಂಡ್ ಅಂಬಾಸಡರ್

Top Post Ad

Click to join Samarasasudhi Official Whatsapp Group

Qries

            ಬೆಂಗಳೂರು: ಫುಟ್​ವೇರ್ ಕಂಪನಿ ವಿಕೆಸಿ ಜೊತೆ ಸಹಭಾಗಿತ್ವ ಹೊಂದುವ ಮೂಲಕ ಬಾಲಿವುಡ್​ ಬಿಗ್ ಬಿ ಅಮಿತಾಭ್ ಬಚ್ಚನ್ ತಮ್ಮ 50 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ ಇದೇ ಮೊದಲ ಬಾರಿಗೆ ಪುಟ್‌ವೇರ್​​ಗೆ ಬ್ರ್ಯಾಂಡ್ ಅಂಬಾಸಡರ್ ಆಗಲು ನಿರ್ಧರಿಸಿದ್ದಾರೆ.

         ಸಾಂಕ್ರಾಮಿಕದ ಈ ಕಾಲದಲ್ಲಿ ಮೊದಲ ಬಾರಿಗೆ ಪುಟ್‌ವೇರ್ ಬ್ರ್ಯಾಂಡ್ ಅಂಬಾಸಡರ್ ಆಗುವ ಅಮಿತಾಭ್ ಬಚ್ಚನ್ ಅವರ ನಿರ್ಧಾರವು ಭಾರತದ ಶ್ರಮಶೀಲ ಮನೋಭಾವಕ್ಕೆ ಹೆಚ್ಚಿನ ಉತ್ಸಾಹ ತುಂಬುವುದು ಖಚಿತ ಎಂದು ವಿಕೆಸಿ ಸಂಸ್ಥೆ ಅಭಿಪ್ರಾಯಪಟ್ಟಿದೆ.

           ವಿಕೆಸಿ ಗ್ರೂಪ್ ಭಾರತದ ಪುಟ್‌ವೇರ್ ಉದ್ಯಮದಲ್ಲಿ ಕ್ರಾಂತಿ ಉಂಟುಮಾಡಿದ್ದು, ಸಮೂಹ ಮಾರುಕಟ್ಟೆ ವಿಭಾಗ ಒಳಗೊಂಡಂತೆ ಎಲ್ಲಾ ಭಾರತೀಯರಿಗೂ ಕೈಗೆಟುಕುವಂತೆ ಮಾಡಲು ದೇಶದಲ್ಲಿ ಪಿಯು ಪುಟ್‌ವೇರ್​ಗಳನ್ನು ಆರಂಭಿಸಿತು. ಈ ಬೆಳವಣಿಗೆಯಿಂದ ವಿಕೆಸಿ ಗ್ರೂಪ್ ದೇಶದಲ್ಲಿ ಅತಿ ಹೆಚ್ಚು ಮಾರಾಟವಾಗುವ ಪಿಯು ಪುಟ್‌ವೇರ್​ ಬ್ರ್ಯಾಂಡ್ ಎನಿಸಿಕೊಂಡಿದೆ. ವಿಕೆಸಿ ಪ್ರೈಡ್​ ತನ್ನ ಸದೃಢ ಗುಣಮಟ್ಟದಿಂದಾಗಿ ಅತ್ಯಂತ ಬೇಡಿಕೆಯ ಬ್ರ್ಯಾಂಡ್ ಆಗಿ ಮಾರ್ಪಟ್ಟಿದೆ ಮತ್ತು ಪುಟ್‌ವೇರ್ ಉದ್ಯಮದಲ್ಲಿ ಹಣಕ್ಕೆ ತಕ್ಕ ಮೌಲ್ಯಕ್ಕಾಗಿ ಅತ್ಯಂತ ಪ್ರಸಿದ್ಧವಾದ ಪುಟ್‌ವೇರ್ ಉತ್ಪನ್ನವಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.

             ಕಳೆದ ತಿಂಗಳು ವಿಕೆಸಿ ಪ್ರೈಡ್​ ಭಾರತದಲ್ಲಿ ಪಿಯು ಪುಟ್‌ವೇರ್ ತಯಾರಿಕೆಯಲ್ಲಿ ಹೊಸ ತಂತ್ರಜ್ಞಾನ ಪರಿಚಯಿಸುವ ಮೂಲಕ ಈಝಿ ಹೆಸರಿನ ಹೊಸ ಸಂಗ್ರಹ ಪ್ರಾರಂಭಿಸಿತು. ವಿಕೆಸಿ ಪ್ರೈಡ್​ ಈಝಿ ಸಂಗ್ರಹವು ಭಾರತದ ಮೊದಲ ಸೂಪರ್ ಸಾಫ್ಟ್​ ಪಿಯು ಪುಟ್‌ವೇರ್ ಎಂಬ ಅಪರೂಪದ ವಿಶೇಷತೆ ಹೊಂದಿದೆ ಎಂಬುದಾಗಿ ಸಂಸ್ಥೆ ಹೇಳಿದೆ.

        ನಟ ಅಮಿತಾಭ್ ಬಚ್ಚನ್ ಅವರು ವಿಕೆಸಿ ಬ್ರ್ಯಾಂಡ್ ಅಂಬಾಸಡರ್ ಆಗುವ ಕುರಿತ ನಿರ್ಣಯ ಅಂತಿಮಗೊಳಿಸಿದ ಸಂದರ್ಭದಲ್ಲಿ ವಿಕೆಸಿ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕ ವಿಕೆಸಿ ರಜಾಕ್, ನಿರ್ದೇಶಕರಾದ ವಿ.ರಫೀಕ್ ಮತ್ತು ವೇಣುಗೋಪಾಲ್ ಉಪಸ್ಥಿತರಿದ್ದರು.

           ವಿಕೆಸಿ ಸಂಸ್ಥೆಯೊಂದಿಗೆ ಸಹಭಾಗಿತ್ವ ಹೊಂದಲು ಮತ್ತು ನಮ್ಮ ಶ್ರಮದ ಸಾಮೂಹಿಕ ಮನೋಭಾವದ ಮೂಲಕ ಭಾರತವನ್ನು ವಿಶ್ವದ ಅಗ್ರಸ್ಥಾನಕ್ಕೆ ಕೊಂಡೊಯ್ಯಲು 'ಸೆಲೆಬ್ರೇಟ್​ ಹಾರ್ಡ್​​ವರ್ಕ್'ಗಾಗಿ ಭಾರತದ ಜನರಿಗೆ ಸ್ಫೂರ್ತಿ ನೀಡಲು ನಾನು ಹೆಮ್ಮೆಪಡುತ್ತೇನೆ. ವಿಕೆಸಿ ಜತೆ ನಾನು ನನ್ನ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಪುಟ್‌ವೇರ್ ಬ್ರ್ಯಾಂಡ್ ಅನುಮೋದಿಸುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ' ಎಂದು ಅಮಿತಾಭ್ ಬಚ್ಚನ್ ಹೇಳಿದರು.

          ವಿಕೆಸಿ ಗ್ರೂಪ್ ಮ್ಯಾನೇಜಿಂಗ್ ಡೈರೆಕ್ಟರ್, ವಿಕೆಸಿ ಅಬ್ದುಲ್ ರಜಾಕ್ ಮಾತನಾಡಿ, 'ಭಾರತೀಯ ಚಿತ್ರರಂಗದ ದಂತಕಥೆ ಅಮಿತಾಭ್ ಬಚ್ಚನ್ ಅವರೊಂದಿಗಿನ ಸಹಭಾಗಿತ್ವವು ವಿಕೆಸಿ ಸಮೂಹಕ್ಕೆ ಗೌರವ ತಂದಿದೆ. ಅಮಿತಾಭ್ ಬಚ್ಚನ್ ಅವರು ವಿಕೆಸಿ ಗ್ರೂಪ್‌ನ ಬ್ರ್ಯಾಂಡ್ ಅಂಬಾಸಡರ್ ಆಗಿ ಮಾತ್ರವಲ್ಲದೆ, ಜಾಗತಿಕ ಪುಟ್‌ವೇರ್ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಚೀನಾ ಜತೆ ಸ್ಪರ್ಧಿಸಲು ಅತ್ಯುತ್ತಮ ಉತ್ಪನ್ನಗಳು, ಹೊಸ ಫ್ಯಾಷನ್ ಮತ್ತು ಆವಿಷ್ಕಾರಗಳನ್ನು ಮಾಡುವಂತೆ ಇಡೀ ಭಾರತದಲ್ಲಿ ಪುಟ್‌ವೇರ್ ಉದ್ಯಮಕ್ಕೆ ಸ್ಫೂರ್ತಿ ನೀಡುತ್ತಾರೆ ಎಂಬ ಖಚಿತ ವಿಶ್ವಾಸವಿದೆ' ಎಂದು ಹೇಳಿದರು.

          ವಿಕೆಸಿ ಗ್ರೂಪ್ ಅಮಿತಾಭ್ ಬಚ್ಚನ್ ಅವರೊಂದಿಗೆ ಶೀಘ್ರದಲ್ಲೇ 'ಸೆಲೆಬ್ರೇಟ್​ ಹಾರ್ಡ್​​ವರ್ಕ್' ಅಭಿಯಾನವನ್ನು ಭಾರತಾದ್ಯಂತ ಆರಂಭಿಸಲಿದೆ. ಈ ಅಭಿಯಾನವು ಭಾರತವನ್ನು 'ಸೆಲೆಬ್ರೇಟ್ ಹಾರ್ಡ್​ವರ್ಕ್'ಗೆ ಸ್ಫೂರ್ತಿ ನೀಡುವುದು ಖಚಿತ. ಏಕೆಂದರೆ ಅವರ ಸ್ವಂತ ಜೀವನವು ಅವರ ಹಿಂದಿನ 50 ವರ್ಷಗಳ ಕಠಿಣ ಪರಿಶ್ರಮಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ ಎಂದರು.

             'ನಾವು ವಿಕೆಸಿ ಪ್ರೈಡ್​ಗಾಗಿ ಕಾರ್ಯತಂತ್ರವನ್ನು ರೂಪಿಸುತ್ತಿರುವಾಗ, ಉತ್ಪನ್ನದ ಎರಡು ನೈಜ ಗುಣಲಕ್ಷಣಗಳಾದ ದೀರ್ಘಬಾಳಿಕೆ ಮತ್ತು ಪ್ರಾಮಾಣಿಕ ಬೆಲೆಗಳು, ಅದರ ಸರಳ ಮತ್ತು ನೇರ ಚಿಂತನೆಯ ಸಮೂಹ ಪ್ರೇಕ್ಷಕರೊಂದಿಗೆ ಬ್ರ್ಯಾಂಡ್ ಸಂಪರ್ಕವನ್ನು ವ್ಯಾಖ್ಯಾನಿಸಲು 'ಹಾರ್ಡ್ ವರ್ಕ್ ಮತ್ತು ಅದರ ಸೆಲೆಬ್ರೇಶನ್' ಮೇಲೆ ಕೇಂದ್ರೀಕರಿಸಲು ನಮಗೆ ಸಹಾಯ ಮಾಡಿತು. ಈ ಬ್ರ್ಯಾಂಡ್ ಧ್ವನಿಯಾದ ಹಾರ್ಡ್​​ವರ್ಕ್​ ಜತೆ ಬ್ರ್ಯಾಂಡ್ ಕಮ್ಯುನಿಕೇಷನ್‌ಗೆ ಹೊರಹೊಮ್ಮುವ ಮುನ್ನ ಕಾರ್ಯತಂತ್ರದ ಹಂತದಿಂದಲೇ ಬಚ್ಚನ್ ಅವರನ್ನು ಹೊರತುಪಡಿಸಿ ಬೇರೆ ಯಾವುದೇ ಪ್ರಸಿದ್ಧ ವ್ಯಕ್ತಿಗಳು ನಮ್ಮ ಮನಸ್ಸಿನಲ್ಲಿರಲಿಲ್ಲ' ಎಂದು ಸಂಸ್ಥಾಪಕ, ಸ್ಟ್ರಾಟಜಿಸ್ಟ್ ಚೀಫ್ ಕ್ರಿಯೇಟಿವ್ ಆಫೀಸರ್, ಬ್ರೇಕ್ ಥ್ರೂ ಬ್ರ್ಯಾಂಡ್ ಮತ್ತು ಬಿಸಿನೆಸ್ ಕನ್ಸಲ್ಟಿಂಗ್ ಆಗಿರುವ ಮನೋಜ್ ಮಥೈ ಹೇಳಿದರು.


Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries