ಮುಳ್ಳೇರಿಯ: ನವ್ಯತಾ ಪೆÇ್ರಡಕ್ಷನ್ಸ್ ಲಾಂಛನದಡಿ ಮೂಡಿಬರುತ್ತಿರುವ ಕಿರುಚಿತ್ರ "ಪರ್ಯಾಪ್ತ"ದ ಚಿತ್ರೀಕರಣ ಪ್ರಗತಿಯಲ್ಲಿದೆ.
ಪ್ರಕೃತಿ ಸಂರಕ್ಷಣೆ ಸಹಿತ ವಿವಿಧ ವಿಚಾರಗಳಲ್ಲಿ ಧ್ವನಿ ಎತ್ತುತ್ತಿರುವ ಈ ಚಿತ್ರ ಆರಂಭದ ಹಂತದಲ್ಲೇ ಭಾರೀ ನಿರೀಕ್ಷೆ ಮೂಡಿಸುತ್ತಿದೆ. ಮಲೆಯಾಳಂ ಚಲನಚಿತ್ರ ನಿರ್ದೇಶಕ, ಕನ್ನಡಿಗ ಕೃಷ್ಣ ಕುಮಾರ್ ಪೆರ್ಮುಖ ಅವರ ನಿರ್ದೇಶನದಲ್ಲಿರುವ ಈ ಚಿತ್ರಕ್ಕೆ ಕಲಾವಿದ ಎ.ಬಿ.ಮಧುಸೂದನ ಬಲ್ಲಾಳ್ ನಾಟೆಕಲ್ಲು ಕಥೆ-ಚಿತ್ರಕಥೆ-ಸಂಭಾಷಣೆ ರಚಿಸಿದ್ದಾರೆ. ಚಿತ್ರೀಕರಣದ ಹೊಣೆಯನ್ನು ಟೀಂ ಫಾಕ್ಸ್ ಸ್ಟಾರ್ ಹೊತ್ತಿದೆ. ಕಾಸರಗೋಡು ಜಿಲ್ಲೆಯ ಪ್ರತಿಭಾವಂತ ಕಲಾವಿದರು ವಿವಿಧ ಪಾತ್ರಗಳಲ್ಲಿದ್ದಾರೆ.
ಚಿತ್ರೀಕರಣದ ಮುಹೂರ್ತ ಬೆಳ್ಳೂರು ಶ್ರೀ ಮಹಾವಿಷ್ಣು ದೇವಾಲಯದಲ್ಲಿ ಜರುಗಿತು. ಹಿರಿಯ ಧಾರ್ಮಿಕ ಮುಂದಾಳು ಸುಬ್ರಹ್ಮಣ್ಯ ಕಡಂಬಳಿತ್ತಾಯ ಮುಹೂರ್ತಕ್ಕೆ ಚಾಲನೆ ನೀಡಿದರು. ಬೆಳ್ಳೂರು ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀಧರ ಎಂ. ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಜಾನಪದ ಲೋಕ ಪ್ರಶಸ್ತಿ ವಿಜೇತ ಯಕ್ಷಗುರು ಜಯರಾಮ ಪಾಟಾಳಿ, ಬೆಳ್ಳೂರು ಮಹಾವಿಷ್ಣು ದೇವಾಲಯದ ಸೇವಾ ಸಮಿತಿ ಅಧ್ಯಕ್ಷ ಎ.ಬಿ.ಗಂಗಾಧರ ಬಲ್ಲಾಳ್, ಡಾ.ಮೋಹನದಾಸ್ ರೈ, ಗಡಿನಾಡ ಕನ್ನಡ ಸಾಂಸ್ಕøತಿಕ ಅಕಾಡೆಮಿ ಕಾರ್ಯದರ್ಶಿ ಅಖೀಲೇಶ್ ನಗುಮುಗಂ, ಯಕ್ಷಗಾನ ಹಾಸ್ಯಗಾರ ಚನಿಯಪ್ಪ ನಾಯ್ಕ್ ಸುಳ್ಯಪದವು, ಹಿರಿಯ ಕಲಾವಿದೆ ಭಾರತೀ ಬಾಬು, ಸುಧೀರ್ ಭಟ್ ಓಲಸಿರಿ ಮೊದಲಾದವರು ಉಪಸ್ಥಿತರಿದ್ದರು.